ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಗುಂಡಿ ಮುಚ್ಚಲು ನ.10ರ ಗಡುವು

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ರಿಂದ ಶಿಸ್ತುಕ್ರಮದ ಎಚ್ಚರಿಕೆ
Last Updated 31 ಅಕ್ಟೋಬರ್ 2022, 21:16 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಸ್ತೆಗಳಲ್ಲಿ ಇನ್ನೂ 11 ಸಾವಿರಕ್ಕೂ ಹೆಚ್ಚು ಗುಂಡಿಗಳಿವೆ. ಇವುಗಳೆಲ್ಲವನ್ನು ಮುಚ್ಚಲು ಬಿಬಿಎಂಪಿ ಎಂಜಿನಿಯರ್‌ಗಳಿಗೆ ಮತ್ತೆ ಹೊಸ ಗಡುವು ನೀಡಿದೆ. ನ.10ರೊಳಗೆ ಎಲ್ಲ ಗುಂಡಿ ಮುಚ್ಚದಿದ್ದರೆ ಶಿಸ್ತುಕ್ರಮ ತೆಗೆದು
ಕೊಳ್ಳುವುದಾಗಿಯೂ ಎಚ್ಚರಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ಸಹಾಯಕ ಎಂಜಿನಿಯರ್‌ಗೂ ಅವರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಗುರಿ ನೀಡಲಾಗಿದೆ.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಮುಖ್ಯ ಎಂಜಿನಿಯರ್‌
ಗಳು ಇದರ ನೇತೃತ್ವ ವಹಿಸಲಿದ್ದಾರೆ. ಜಂಟಿ ಆಯುಕ್ತರು ಮೇಲ್ವಿಚಾರಣೆ ನಡೆಸಲಿದ್ದಾರೆ.

ನ.5ರೊಳಗೆ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಇನ್ನಷ್ಟು ಉಳಿದರೆ ನ.10ರೊಳಗೆ ಎಲ್ಲ ಗುಂಡಿಗಳು ಮುಚ್ಚಬೇಕು. ಅದಾಗದಿದ್ದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಸುತ್ತೋಲೆ ರವಾನಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿಹೆಚ್ಚು ಮಳೆಯಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳನ್ನು ಮುಚ್ಚಲು ಮಳೆ ಅಡ್ಡಿಯಾಗಿತ್ತು. ಕಳೆದ ಒಂದು ವಾರದಲ್ಲಿ ಮಳೆ ಇಲ್ಲದ್ದರಿಂದ ಗುಂಡಿ ಮುಚ್ಚುವ ಕಾರ್ಯ ಸಾಕಷ್ಟು ವೇಗವಾಗಿ ನಡೆದಿದೆ. ಸುಮಾರು 19 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಯೋಜನೆ ವಿಭಾಗದ ವಿಶೇಷ ಆಯುಕ್ತ ರವೀಂದ್ರ ತಿಳಿಸಿದರು.

ನ.1ರೊಳಗೆ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಯೋಜನೆ ರೂಪಿಸಲಾಗಿತ್ತು. ಆದರೆ, ಡಾಂಬರು ಘಟಕಗಳಲ್ಲಿ ಕಾರ್ಯನಿರ್ವಹಿಸುವವರು ದೀಪಾವಳಿ ಹಬ್ಬದಿಂದಾಗಿ ಕೆಲಸಕ್ಕೆ ಬಂದಿರಲಿಲ್ಲ. ಹೀಗಾಗಿ, ಗುರಿ ಮುಟ್ಟಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಪೂರ್ವದಲ್ಲಿ ಅತಿಹೆಚ್ಚು: ಬಿಬಿಎಂಪಿಯ ಪೂರ್ವ ವಲಯದಲ್ಲಿ ಈ ವರ್ಷ ಒಟ್ಟು 5,776 ಗುಂಡಿಗಳನ್ನು ಗುರುತಿಸ
ಲಾಗಿದೆ. ಈವರೆಗೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದರೂ ಇನ್ನೂ 1,646 ಗುಂಡಿಗಳು ಬಾಯಿ ತೆರೆದುಕೊಂಡೇ ಇವೆ. ಬಾಕಿ ಇರುವ ಗುಂಡಿಯಲ್ಲೂ ವಲಯಗಳಲ್ಲಿ ‘ಪೂರ್ವ’ವೇ ಮುಂದು. ಇನ್ನು, ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಗುಂಡಿ ಮುಚ್ಚುವ ಪೈಥಾನ್‌ ಯಂತ್ರ ಕೆಲಸವೇ ಮಾಡುತ್ತಿಲ್ಲ. ಅದರ ಗುತ್ತಿಗೆಯನ್ನು ರದ್ದುಮಾಡಿಸಲು ಸರ್ಕಾರಕ್ಕೆ ಪತ್ರವನ್ನೂ ಬಿಬಿಎಂಪಿ ಬರೆದಿದೆ. ಹೀಗಾಗಿ, ಪೈಥಾನ್‌ 5,605 ಗುಂಡಿಗಳನ್ನು ಮುಚ್ಚಬೇಕಿತ್ತು. 1,934 ಮುಚ್ಚಿದ್ದು, 3,671 ಗುಂಡಿಗಳು ಬಾಕಿ ಇವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳ ವಿವರ

ವಲಯ;ಗುರುತಿಸಲಾದ ಗುಂಡಿಗಳು;ದುರಸ್ತಿ;ಬಾಕಿ

ಬೊಮ್ಮನಹಳ್ಳಿ;1,409;1,090;319

ದಾಸರಹಳ್ಳಿ;1,918;601;1,317

ಪೂರ್ವ;5,776;4,130;1,646

ಮಹದೇವಪುರ;2,004;1,409;595

ಆರ್.ಆರ್‌. ನಗರ;3,196;2,351;845

ದಕ್ಷಿಣ;1,915;1,514;401

ಪಶ್ಚಿಮ;4,501;4,079;422

ಯಲಹಂಕ;1,015;592;423

ರಸ್ತೆ ಮೂಲಸೌಕರ್ಯ;3,233;1,556;1,677

ಸಿಇ ಯೋಜನೆ (ಪೈಥಾನ್‌);5,605;1,934;3,671

ಒಟ್ಟು;30,572;19,256;11,316

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT