ಬುಧವಾರ, ಸೆಪ್ಟೆಂಬರ್ 22, 2021
22 °C

ಹಳೇ ಚಪ್ಪಲಿ ಮಾರಾಟಕ್ಕಿಟ್ಟು ₹ 1 ಲಕ್ಷ ಕಳೆದುಕೊಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮ ಹಳೇ ಚಪ್ಪಲಿ ಹಾಗೂ ಶೂಗಳನ್ನು ‘ಓಎಲ್‌ಎಕ್ಸ್‌’ ಜಾಲತಾಣದಲ್ಲಿ ಮಾರಾಟಕ್ಕಿಟ್ಟಿದ್ದ ನಗರದ ಯುವಕರೊಬ್ಬರು ₹ 1.05 ಲಕ್ಷ ಕಳೆದುಕೊಂಡಿದ್ದಾರೆ.

‘ಬಾಗಲೂರಿನಲ್ಲಿ ವಾಸವಿರುವ 27 ವರ್ಷದ ಯುವಕ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಿಮಾನಯಾನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವಕ, ‘ಹಳೇ ಚಪ್ಪಲಿ ಹಾಗೂ ಶೂ ಮಾರಾಟಕ್ಕಿದೆ’ ಎಂದು ಓಎಲ್‌ಎಕ್ಸ್ ಜಾಲತಾಣದಲ್ಲಿ ಫೋಟೊ ಸಮೇತ ಜಾಹೀರಾತು ನೀಡಿದ್ದರು. ಅದನ್ನು ನೋಡಿ ಕರೆ ಮಾಡಿದ್ದ ಆರೋಪಿ, ಚಪ್ಪಲಿ ಹಾಗೂ ಶೂ ಖರೀದಿ ಮಾಡುವುದಾಗಿ ಹೇಳಿದ್ದ.’

‘ಮುಂಗಡವಾಗಿ ಹಣ ಹಾಕುವುದಾಗಿ ತಿಳಿಸಿದ್ದ ಆರೋಪಿ, ಕೆಲ ಮಾಹಿತಿ ಪಡೆದಿದ್ದ. ‘ಗೂಗಲ್ ಪೇ ಆ್ಯಪ್‌ಗೆ ಹಣ ಕಳುಹಿಸಿದ್ದೇನೆ. ಪರಿಶೀಲಿಸಿ’ ಎಂದಿದ್ದ. ಅದನ್ನು ನಂಬಿದ್ದ ಯುವಕ, ಆ್ಯಪ್ ತೆರೆದು ನೋಡುವಷ್ಟರಲ್ಲೇ ಖಾತೆಯಿಂದ ಹಂತ ಹಂತವಾಗಿ ₹ 1.05 ಲಕ್ಷ ಕಡಿತವಾಗಿದೆ. ನಂತರ, ಆರೋಪಿ ಸಹ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು