ಬೆಂಗಳೂರು: ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದು ರೇಜರ್ ಬ್ಲೇಡ್. ಆದರೆ, ಮನೆಗೆ ಬಂದಿದ್ದು ಹಳೆ ತುಂಡು ಬಟ್ಟೆ...

ನಿವೃತ್ತ ನ್ಯಾಯಮೂರ್ತಿ, ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಆನ್ಲೈನ್ ಶಾಪಿಂಗ್ ಮಾಡಿ ವಂಚನೆಗೆ ಒಳಗಾಗಿದ್ದಾರೆ.

ಈ ಸಂಬಂಧ ಫಣೀಂದ್ರ ಅವರು ನೀಡಿದ ದೂರಿನ ಮೇರೆಗೆ ಕೇಂದ್ರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ವಿಜಯ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಆರೋಪಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66 ‘ಡಿ’ ಹಾಗೂ ಭಾರತೀಯ ನ್ಯಾಯ ಸಂಹಿತೆ 318(4) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಸೈಬರ್ ಠಾಣೆಯ ಪೊಲೀಸರು ಹೇಳಿದರು.

‘ಫಣೀಂದ್ರ ಅವರು ಗುಡ್ ಮ್ಯಾಕ್ಸ್ ಕಂಪನಿಯ ವೆಬ್ಸೈಟ್ ಮೂಲಕ ಫೆ.4 ರಂದು ರೇಜರ್ ಬ್ಲೇಡ್ ಆರ್ಡರ್ ಮಾಡಿದ್ದರು. ಶ್ಯಾಡೊಫ್ಯಾಕ್ಸ್ ಸರ್ಫೇಸ್ ಲಾಜಿಸ್ಟಿಕ್ ಸಂಸ್ಥೆಯ ವಿಜಯ್ ಅವರು ಫೆ.9ರಂದು ಕರೆ ಮಾಡಿ, ‘ಆರ್ಡರ್ ಮಾಡಿರುವ ವಸ್ತು ಬಂದಿದೆ’ ಎಂದು ಹೇಳಿ ವಿತರಣೆಗೆ ದೃಢೀಕರಣ ಕೇಳಿದ್ದರು. ಆ ಸಮಯದಲ್ಲಿ ದೂರುದಾರರು ಕಚೇರಿಯಲ್ಲಿದ್ದ ಕಾರಣ, ಮನೆಗೆ ಪಾರ್ಸೆಲ್ ತಲುಪಿಸುವಂತೆ ಹೇಳಿದ್ದರು. ವಿಜಯ್ ಅವರು ಫಣೀಂದ್ರ ಅವರ ಮನೆಯ ವಿಳಾಸಕ್ಕೆ ಪಾರ್ಸೆಲ್ ತಲುಪಿಸಿ, ₹699 ನಗದು ಪಡೆದು ತೆರಳಿದ್ದರು. ದೂರುದಾರರು ಮನೆಗೆ ಬಂದು ಪಾರ್ಸೆಲ್ ಕವರ್ ತೆರೆದು ಪರಿಶೀಲಿಸಿದಾಗ ರೇಜರ್ ಬ್ಲೇಡ್ ಬದಲು ಹಳೆ ಬಟ್ಟೆ ಬಂದಿರುವುದು ಗೊತ್ತಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಮನೆಗೆ ಪಾರ್ಸೆಲ್ ತಲುಪಿಸಿದ ವಿಜಯ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದಾಗ, ಅವರು ತೃಪ್ತಿಕರ ಉತ್ತರ ನೀಡಿಲ್ಲ. ಪಾರ್ಸೆಲ್ ಒಳಗಿರುವ ವಸ್ತುವಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಕಂಪನಿಯನ್ನೇ ಸಂಪರ್ಕಿಸಿ ಎಂದೂ ಸೂಚಿಸಿದ್ದರು. ಆರ್ಡರ್ ಮಾಡಿದ ವಸ್ತುವಿನ ಬದಲಿಗೆ ಬೇರೊಂದು ವಸ್ತು ನೀಡಿ ಮೋಸ ಮಾಡಿರುವ ಗುಡ್ ಮ್ಯಾಕ್ಸ್ ಕಂಪನಿ ಹಾಗೂ ಆ ವಸ್ತು ವಿತರಣೆ ಮಾಡಿರುವ ಶ್ಯಾಡೊಫ್ಯಾಕ್ಸ್ ಸರ್ಫೇಸ್ ಲಾಜಿಸ್ಟಿಕ್ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ಫಣೀಂದ್ರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.