ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಆನ್‌ಲೈನ್‌ನಲ್ಲಿ ಹಣ ಕಳುಹಿಸುವ ನೆಪದಲ್ಲಿ ವಂಚನೆ

Published 24 ಜನವರಿ 2024, 16:25 IST
Last Updated 24 ಜನವರಿ 2024, 16:25 IST
ಅಕ್ಷರ ಗಾತ್ರ

ಬೆಂಗಳೂರು: ಎಟಿಎಂ ಕೇಂದ್ರಗಳಿಗೆ ಹಣ ಡ್ರಾ ಮಾಡಲು ಹಾಗೂ ಹಣ ಠೇವಣಿಯಿಡಲು ಬರುತ್ತಿದ್ದವರ ಮನವೊಲಿಸಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

ಆರ್.ಟಿ.ನಗರದ ನಿವಾಸಿ ಸಾಯಿಲ್ (24) ಬಂಧಿತ.

‘ಎಟಿಎಂ ಕೇಂದ್ರಗಳ ಎದುರು ನಿಂತು, ಹಣ ಹಾಕಲು ಬಂದವರ ಬಳಿ ತುರ್ತು ಹಣ ಬೇಕಾಗಿದ್ದು ಆನ್‌ಲೈನ್ ಮೂಲಕ ನಿಮಗೆ ಹಣ ಕಳಿಸುವುದಾಗಿ ಮನವಿ ಮಾಡುತ್ತಿದ್ದ. ಆರೋಪಿಯ ಮಾತು ನಂಬಿ ಕೆಲವರು ಹಣ ಕೊಡುತ್ತಿದ್ದರು. ವಂಚಿಸಲೆಂದೇ ಸೃಷ್ಟಿಸಿದ್ದ ನಕಲಿ ಅಪ್ಲಿಕೇಷನ್ ಮೂಲಕ ಹಣ ಕಳುಹಿಸಿರುವ ರೀತಿ ಸಂದೇಶ ಕಳುಹಿಸಿಸುತ್ತಿದ್ದ. ತಮ್ಮ ಮೊಬೈಲ್‌ಗೆ ಸಂದೇಶ ಬಂದಿರುವುದನ್ನು ನೋಡಿ, ಹಣ ಬಂದಿದೆ ಎಂದು ಜನರು ನಂಬುತ್ತಿದ್ದರು. ಆದರೆ, ನೈಜವಾಗಿ ಅವರ ಖಾತೆಗೆ ದುಡ್ಡು ಜಮೆ ಆಗುತ್ತಿರಲಿಲ್ಲ. ಸಾಯಿಲ್ ಕೈಗೆ ದುಡ್ಡು ಬರುತ್ತಿದ್ದಂತೆ ಕೈಗೆ ಸಿಗದೇ ಪರಾರಿಯಾಗುತ್ತಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT