ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಲ್ವಾನ್ ಸಿನಿಮಾ ಪೈರಸಿಯ ಮೂಲ ಭೇದಿಸಿದ ಸಿಸಿಬಿ ಪೊಲೀಸರು

Last Updated 20 ಸೆಪ್ಟೆಂಬರ್ 2019, 8:39 IST
ಅಕ್ಷರ ಗಾತ್ರ

ಬೆಂಗಳೂರು: ನಟ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾವನ್ನು ಫೇಸ್‌ಬುಕ್‌ನಲ್ಲಿ ಲೈನ್ ಮಾಡಿ ಲಿಂಕ್ ಶೇರ್ ಮಾಡಿದ್ದ ಆರೋಪದಡಿ ರಾಕೇಶ್ ಎಂಬಾತನನ್ನು ಬಂಧಿಸಲಾಗಿದೆ.

ನೆಲಮಂಗಲದ ರಾಕೇಶ್, ಇತ್ತೀಚೆಗೆ ಚಿತ್ರಮಂದಿರದಲ್ಲಿ ಫೇಸ್‌ಬುಕ್‌ ಲೈವ ಮಾಡಿದ್ದ. ಅದನ್ನು ಹಲವರು ಪೈರಸಿ ಮಾಡಿದ್ದರು. ಈ ಸಂಬಂಧ ಸಿನಿಮಾ ನಿರ್ಮಾಪಕಿ ಸ್ವಪ್ನ ಕೃಷ್ಣ ದೂರು ನೀಡಿದ್ದರು.

ರಾಕೇಶ್
ರಾಕೇಶ್

ಆರೋಪಿ, ಪೂರ್ತಿ ಸಿನಿಮಾ ನೋಡಲು ಇನ್ ಬಾಕ್ಸ್ಗೆ ಮೆಸೇಜ್ ಮಾಡಿ ಎಂದು ಪೋಸ್ಟ್ ಸಹ ಪ್ರಕಟಿಸಿದ್ದ.

‘ಸಾಕಷ್ಟು ಶ್ರಮ ವಹಿಸಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ನಿರ್ಮಿಸಲಾಗಿದೆ. 3 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಕಂಡಿದೆ. ಯಾರೋ ಕಿಡಿಗೇಡಿಗಳು, ಒಂದೇ ದಿನದಲ್ಲೇ ಸಿನಿಮಾದ ಪೈರಸಿ ಮಾಡಿದ್ದಾರೆ. ಟೆಲಿಗ್ರಾಂ ಆ್ಯಪ್ ಹಾಗೂ ನಾನಾ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ’ ಎಂದು ಸ್ವಪ್ನ ಕೃಷ್ಣ ದೂರಿದ್ದರು.

ಸಿಸಿಬಿಯ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ, ‘ಸಿನಿಮಾದ ಪೈರಸಿ ಲಿಂಕ್‌ ಅನ್ನು ಫೇಸ್‌ಬುಕ್‌ನಲ್ಲಿ ಹರಿಬಿಡಲಾಗಿದೆ. ಆ ಬಗ್ಗೆ ನಿರ್ಮಾಪಕರು ನೀಡಿರುವ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದರು.

3,500ಕ್ಕೂ ಹೆಚ್ಚು ಲಿಂಕ್‌: ದೂರು ಸಲ್ಲಿಕೆ ನಂತರ ಮಾತನಾಡಿದ್ದಸ್ವಪ್ನ ಕೃಷ್ಣ, ‘ಸಿನಿಮಾದ ಪೈರಸಿಯ 3,500ಕ್ಕೂ ಹೆಚ್ಚು ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಆ ಬಗ್ಗೆ ಪೊಲೀಸರಿಗೂ ತಿಳಿಸಲಾಗಿದೆ’ ಎಂದು ಹೇಳಿದರು.

‘ನಟ ದರ್ಶನ್ ಅಭಿಮಾನಿಗಳು ಪೈರಸಿ ಮಾಡಿದ್ದಾರೆ ಎನ್ನಲಾಗುತ್ತಿದೆ. ನಿಜವೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರ‍್ಯಾರು ಮಾಡಿಲ್ಲ. ಇದು ಯಾರೋ ಕಿಡಿಗೇಡಿಗಳ ಕೃತ್ಯ. ಯಾರೇ ಪೈರಸಿ ಮಾಡಿದರೂ ಅದು ತಪ್ಪು. ಚಿತ್ರರಂಗದ ಬೆಳವಣಿಗೆಗೆ ಪೈರಸಿ ಮಾರಕ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT