ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ವೈಟ್‌ಫೀಲ್ಡ್‌ನ ಸ್ಥಳೀಯರ ಆಕ್ರೋಶ

Last Updated 10 ಆಗಸ್ಟ್ 2018, 20:12 IST
ಅಕ್ಷರ ಗಾತ್ರ

ಬೆಂಗಳೂರು: ‘ವೈಟ್‌ಫೀಲ್ಡ್‌ನ ಗ್ರಾಫೈಟ್‌ ಇಂಡಿಯಾ ಕಾರ್ಖಾನೆ ಹೊರಸೂಸುವ ರಾಸಾಯನಿಕ ಹೊಗೆಯಿಂದಾಗಿ ಉಸಿರಾಡಲು ಸ್ವಚ್ಛ ಗಾಳಿ ಸಿಗುತ್ತಿಲ್ಲ, ಮಕ್ಕಳು ಮರಿಯನ್ನದೆ ಎಲ್ಲರೂ ಕಾಯಿಲೆ ಬೀಳುತ್ತಿದ್ದು, ಗಿಡಗಳೂ ಸಹ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ’

ಆರ್‌ಎಕ್ಸ್‌ಡಿಎಕ್ಸ್‌ ಹೆಲ್ತ್‌ ಕೇರ್‌ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ವೈಟ್‌ಫೀಲ್ಡ್‌ ನಿವಾಸಿಗಳು ಅಳಲು ತೋಡಿಕೊಂಡ ಪರಿ ಇದು.

‘ಮೂರು ತಿಂಗಳುಗಳಿಂದ ಕಾರ್ಖಾನೆಯ ಹೊಗೆಯಲ್ಲಿ ದೂಳಿನ ಪ್ರಮಾಣ ಹೆಚ್ಚಾಗಿದೆ. ಅಡುಗೆಯಲ್ಲಿ, ಮನೆಯ ಮೂಲೆ ಮೂಲೆಯಲ್ಲೂ ದೂಳೇ ತಾಂಡವವಾಡುತ್ತಿದೆ. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ’ ಎಂದು ವೈಟ್‌ಫೀಲ್ಡ್‌ ರೈಸಿಂಗ್‌ ಸಂಸ್ಥೆಯ ನಿತ್ಯಾ ರಾಮಕೃಷ್ಣ ಬೇಸರಿಸಿದರು.

‘ರಾಸಾಯನಿಕ ದೂಳಿನಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳ ಪೈಕಿ ಚರ್ಮರೋಗ, ಉಸಿರಾಟದ ಸಮಸ್ಯೆಗಳಿಂದ ಬಳುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಮಕ್ಕಳ ಆರೋಗ್ಯದಲ್ಲಿ ವಿಪರೀತ ಏರುಪೇರುಗಳು ಕಂಡು ಬರುತ್ತಿವೆ’ ಎಂದು ಆರ್‌ಎಕ್ಸ್‌ಡಿಎಕ್ಸ್‌ ಹೆಲ್ತ್‌ ಕೇರ್‌ ಸಂಸ್ಥೆಯ ವೈದ್ಯೆ ಡಾ.ಗುರುಮೀತ್‌ ಹೇಳಿದರು.

‘ಹೆಲ್ತ್‌ ಕೇರ್‌ ಸಂಸ್ಥೆ ಮತ್ತು ಸ್ಥಳೀಯರು ಸೇರಿ 2015ರಲ್ಲಿ ಕಾರ್ಖಾನೆ ವಿರುದ್ಧ ಕೇಸ್‌ ದಾಖಲಿಸಿದ್ದೆವು. ತೀರ್ಪು ಬಂದ ನಂತರ ಕಾರ್ಖಾನೆ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು. ಆದರೆ, ಈಗ ವಾಯುಮಾಲಿನ್ಯ ಮತ್ತೆ ಹೆಚ್ಚಿದೆ. ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದುಹೆಲ್ತ್‌ ಕೇರ್‌ ಸಂಸ್ಥೆಯ ದಿನೇಶ್‌ ಮಲ್ಲಿಕ್‌ ತಿಳಿಸಿದರು.

‘ವೈಟ್‌ಫೀಲ್ಡ್‌ ಸುತ್ತಮುತ್ತಲಲ್ಲಿ ಮಂಡಳಿಮಾಲಿನ್ಯ ಪತ್ತೆ ಶೋಧಕಗಳನ್ನು ಅಳವಡಿಸಿಲ್ಲ. ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಕಾರ್ಖಾನೆಗೂ ನಿರ್ದೇಶನ ನೀಡುತ್ತಿಲ್ಲ. ಕೂಡಲೇ ಈ ಕುರಿತು ಮಂಡಳಿ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ವೈಟ್‌ಫೀಲ್ಡ್‌ನ ಗ್ರಾಫೈಟ್‌ ಇಂಡಿಯಾ ಕಾರ್ಖಾನೆ ಹೊರಸೂಸುವ ರಾಸಾಯನಿಕ ಹೊಗೆಯಿಂದಾಗಿ ಉಸಿರಾಡಲು ಸ್ವಚ್ಛ ಗಾಳಿ ಸಿಗುತ್ತಿಲ್ಲ, ಮಕ್ಕಳು ಮರಿಯನ್ನದೆ ಎಲ್ಲರೂ ಕಾಯಿಲೆ ಬೀಳುತ್ತಿದ್ದು, ಗಿಡಗಳೂ ಸಹ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ’

ಆರ್‌ಎಕ್ಸ್‌ಡಿಎಕ್ಸ್‌ ಹೆಲ್ತ್‌ ಕೇರ್‌ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ವೈಟ್‌ಫೀಲ್ಡ್‌ ನಿವಾಸಿಗಳು ಅಳಲು ತೋಡಿಕೊಂಡ ಪರಿ ಇದು.

‘ಮೂರು ತಿಂಗಳುಗಳಿಂದ ಕಾರ್ಖಾನೆಯ ಹೊಗೆಯಲ್ಲಿ ದೂಳಿನ ಪ್ರಮಾಣ ಹೆಚ್ಚಾಗಿದೆ. ಅಡುಗೆಯಲ್ಲಿ, ಮನೆಯ ಮೂಲೆ ಮೂಲೆಯಲ್ಲೂ ದೂಳೇ ತಾಂಡವವಾಡುತ್ತಿದೆ. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ’ ಎಂದು ವೈಟ್‌ಫೀಲ್ಡ್‌ ರೈಸಿಂಗ್‌ ಸಂಸ್ಥೆಯ ನಿತ್ಯಾ ರಾಮಕೃಷ್ಣ ಬೇಸರಿಸಿದರು.

‘ರಾಸಾಯನಿಕ ದೂಳಿನಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳ ಪೈಕಿ ಚರ್ಮರೋಗ, ಉಸಿರಾಟದ ಸಮಸ್ಯೆಗಳಿಂದ ಬಳುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಮಕ್ಕಳ ಆರೋಗ್ಯದಲ್ಲಿ ವಿಪರೀತ ಏರುಪೇರುಗಳು ಕಂಡು ಬರುತ್ತಿವೆ’ ಎಂದು ಆರ್‌ಎಕ್ಸ್‌ಡಿಎಕ್ಸ್‌ ಹೆಲ್ತ್‌ ಕೇರ್‌ ಸಂಸ್ಥೆಯ ವೈದ್ಯೆ ಡಾ.ಗುರುಮೀತ್‌ ಹೇಳಿದರು.

‘ಹೆಲ್ತ್‌ ಕೇರ್‌ ಸಂಸ್ಥೆ ಮತ್ತು ಸ್ಥಳೀಯರು ಸೇರಿ 2015ರಲ್ಲಿ ಕಾರ್ಖಾನೆ ವಿರುದ್ಧ ಕೇಸ್‌ ದಾಖಲಿಸಿದ್ದೆವು. ತೀರ್ಪು ಬಂದ ನಂತರ ಕಾರ್ಖಾನೆ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು. ಆದರೆ, ಈಗ ವಾಯುಮಾಲಿನ್ಯ ಮತ್ತೆ ಹೆಚ್ಚಿದೆ. ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದುಹೆಲ್ತ್‌ ಕೇರ್‌ ಸಂಸ್ಥೆಯ ದಿನೇಶ್‌ ಮಲ್ಲಿಕ್‌ ತಿಳಿಸಿದರು.

‘ವೈಟ್‌ಫೀಲ್ಡ್‌ ಸುತ್ತಮುತ್ತಲಲ್ಲಿ ಮಂಡಳಿಮಾಲಿನ್ಯ ಪತ್ತೆ ಶೋಧಕಗಳನ್ನು ಅಳವಡಿಸಿಲ್ಲ. ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಕಾರ್ಖಾನೆಗೂ ನಿರ್ದೇಶನ ನೀಡುತ್ತಿಲ್ಲ. ಕೂಡಲೇ ಈ ಕುರಿತು ಮಂಡಳಿ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
**
ನಮ್ಮ ಸಂಸ್ಥೆಯಿಂದ ವಾಯು ಮಾಲಿನ್ಯ ಆಗುತ್ತಿಲ್ಲ. ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ.
–ಎಂ.ವಿ.ಮಂಜುನಾಥ, ಹಿರಿಯ ವ್ಯವಸ್ಥಾಪಕ, ಗ್ರಾಫೈಟ್‌ ಇಂಡಿಯಾ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT