ಬುಧವಾರ, ಮೇ 25, 2022
31 °C

‘ಪೀಪಲ್ ಟ್ರೀ’ ಆಸ್ಪತ್ರೆಯಲ್ಲಿ ಕ್ರಿಸ್‌ ಗೋಪಾಲಕೃಷ್ಣನ್ ಹೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಟಿಎಂಐ ಹೆಲ್ತ್‌ಕೇರ್‌ ಪ್ರೈವೇಟ್‌ ಲಿಮಿಟೆಡ್‌’ನಲ್ಲಿ ಉದ್ಯಮಿ ಕ್ರಿಸ್‌ ಗೋಪಾಲಕೃಷ್ಣನ್‌ ಅವರ ‘ಪ್ರತೀತಿ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌’ನ ಹೂಡಿಕೆ ಪ್ರಕ್ರಿಯೆಯು ಗುರುವಾರ ಪೂರ್ಣಗೊಂಡಿದೆ.

ನಗರದಲ್ಲಿ ಪೀಪಲ್ ಟ್ರೀ ಹಾಸ್ಪಿಟಲ್‌ಗಳನ್ನು ಟಿಎಂಐ ಹೆಲ್ತ್‌ಕೇರ್‌ ಹೊಂದಿದೆ. ವಿಶೇಷ ಮನೋವೈದ್ಯಕೀಯ ಆಸ್ಪತ್ರೆ ಸೇರಿದಂತೆ ನಾಲ್ಕು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಇದು ಹೊಂದಿದೆ. ಪೀಪಲ್ ಟ್ರೀ ಆಸ್ಪತ್ರೆಗಳು 40ಕ್ಕೂ ಹೆಚ್ಚು ವಿಶೇಷ ಸೌಲಭ್ಯಗಳನ್ನು ಹೊಂದಿದೆ. ‘ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿದ್ದೇವೆ. ಕ್ರಿಸ್‌ ಗೋಪಾಲಕೃಷ್ಣ ಅವರ ಬೆಂಬಲದಿಂದ ಮತ್ತಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗು
ತ್ತದೆ’ ಎಂದು ಪೀಪಲ್ ಟ್ರೀ ಹಾಸ್ಪಿಟಲ್ಸ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಡಾ. ಜ್ಯೋತಿ ಎಸ್ ನೀರಜಾ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.