ಗಂಗಾಧರ್ ಅವರ ಕ್ಯಾಂಟರ್ ಬೆಳಗಿನ ಜಾವ 5.30ರ ಸುಮಾರಿನಲ್ಲಿ ಪಂಚರ್ ಆಗಿ ರಸ್ತೆ ಬದಿ ನಿಲ್ಲಿಸಿಕೊಂಡಿದ್ದರು. ಕೆಳಗೆ ಇಳಿದು ವೀಕ್ಷಿಸುತ್ತಿದ್ದ ಗಂಗಾಧರ್ ಮೇಲೆ ಮಸ್ತಾನ್ ಅಲಿ ಚಾಲನೆ ಮಾಡುತ್ತಿದ್ದ ಕ್ಯಾಂಟರ್ ಹರಿದು ಸ್ಥಳದಲ್ಲೇ ಮೃತರಾಗಿದ್ದಾರೆ. ಜೊತೆಯಲ್ಲಿದ್ದ ಓಬಣ್ಣ, ಕ್ಯಾಂಟರ್ ಚಾಲಕ ಮಸ್ತಾನ್ ಅಲಿ, ಮುಜೀಬ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅತಿ ವೇಗ ಹಾಗೂ ಅಜಾರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.