ನ್ಯಾಯಾಲಯದ ಆದೇಶಗಳು ಪಾಲನೆಯಾಗದೇ ಇರುವುದಕ್ಕೆ ಸರ್ಕಾರದ ಜೊತೆಗೆ ಸಕ್ಷಮ ಪ್ರಾಧಿಕಾರಗಳು ಶಾಸನಾತ್ಮಕ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಗಳೂ ಸಮಾನ ಜವಾಬ್ದಾರಿ ಹೊಂದಿವೆ
-.ಎನ್.ವಿ.ಅಂಜಾರಿಯಾ ಮುಖ್ಯ ನ್ಯಾಯಮೂರ್ತಿ.
‘ಮೂಲಭೂತ ಹಕ್ಕಿನ ಉಲ್ಲಂಘನೆ’
‘ನ್ಯಾಯಾಲಯಗಳ ಮೊರೆ ಹೋಗುವುದು ಸಾರ್ವಜನಿಕರ ಮೂಲಭೂತ ಹಕ್ಕು. ಆದರೆ ಕೋರ್ಟ್ ನೀಡಿದ ಆದೇಶಗಳನ್ನು ಅಧಿಕಾರಿಗಳು ಪಾಲಿಸದೇ ಇರುವುದು ಸಾರ್ವಜನಿಕರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ’ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ‘ನ್ಯಾಯಾಲಯಗಳ ಆದೇಶ ಪಾಲಿಸಲು ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷವನ್ನು ಸಹಿಸಲಾಗದು. ಕೋರ್ಟ್ ಆದೇಶ ಜಾರಿಯ ವಿಳಂಬದಿಂದ ನ್ಯಾಯ ವಂಚಿಸಿದಂತಾಗಲಿದೆ’ ಎಂದು ಹೇಳಿದೆ.