ಮಂಗಳವಾರ, ಆಗಸ್ಟ್ 11, 2020
26 °C

ಬೆಂಗಳೂರು | ಡೆಲಿವರಿ ಬಾಯ್‌ ಮೇಲೆ ಕಲ್ಲಿನಿಂದ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಹಾರವನ್ನು ತಲುಪಿಸುವ ಸಿಬ್ಬಂದಿ (ಡೆಲಿವರಿ ಬಾಯ್‌) ಮೇಲೆ ಕಲ್ಲಿನಿಂದ ಹಲ್ಲೆ ಮಾಡಲಾಗಿದ್ದು, ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹಲ್ಲೆಗೀಡಾಗಿರುವ ಸಿಬ್ಬಂದಿ ಹಿರೇಮಠ ಎಂಬುವರು ದೂರು ನೀಡಿದ್ದಾರೆ. ಆಹಾರ ತಲುಪಿಸುವಂತೆ ಕೋರಿಕೆ ಸಲ್ಲಿಸಿದ್ದ ಗ್ರಾಹಕ ಭರತ್‌ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಸ್ತೂರಿ ನಗರದ ಪಿಜ್ಜಾ ಕೇಂದ್ರದಲ್ಲಿ ಹಿರೇಮಠ ಕೆಲಸ ಮಾಡುತ್ತಾರೆ. ಜುಲೈ 28ರ ರಾತ್ರಿ ಆರೋಪಿ ಭರತ್, ಆನ್‌ಲೈನ್‌ನಲ್ಲಿ‌ ಪಿಜ್ಜಾ ಆರ್ಡರ್ ಮಾಡಿದ್ದ. ಪಿಜ್ಜಾ ತಲುಪಿಸಲು ದೊಡ್ಡ ಬಾಣಸವಾಡಿ ಬಳಿಯ‌ ಮುನೇಶ್ವರ ದೇವಾಲಯ ಬಳಿಗೆ ಹಿರೇಮಠ ಹೋಗಿದ್ದರು. ಪಿಜ್ಜಾ ನೀಡಿದ ಬಳಿಕ ಬಿಲ್ ಪಾವತಿಸುವಂತೆ ಕೇಳಿದ್ದರು.’

‘ಮದ್ಯದ ಅಮಲಿನಲ್ಲಿದ್ದ ಆರೋಪಿಗಳು, ಬಿಲ್ ಕೊಡುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆಗ ಆರೋಪಿಗಳು, ಹಿರೇಮಠ ಅವರ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ’ ಎಂದೂ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು