ಗುರುವಾರ , ಮೇ 26, 2022
30 °C
ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವಂತೆ ಬಿಬಿಎಂಪಿ ಉತ್ತೇಜನ

ಲಸಿಕೆ ಹಾಕಿಸಿಕೊಳ್ಳುವ ಪೌರಕಾರ್ಮಿಕರಿಗೆ ಅರ್ಧದಿನ ವೇತನ ಸಹಿತ ರಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೌರಕಾರ್ಮಿಕರೆಲ್ಲರೂ ಶುಕ್ರವಾರ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಬಿಬಿಎಂಪಿ ಹೇಳಿದೆ. ಲಸಿಕೆ ಹಾಕಿಸಿಕೊಳ್ಳುವ ಪೌರಕಾರ್ಮಿಕರಿಗೆ ಪಾಲಿಕೆ ಅರ್ಧ ದಿನ ವೇತನಸಹಿತ ರಜೆ ನೀಡಲಿದೆ.

ಶುಕ್ರವಾರ ಬೆಳಿಗ್ಗೆ 10.30ಕ್ಕೆ ಎರಡನೇ ಮಸ್ಟರಿಂಗ್‌ ಹಾಜರಾತಿ ಮುಗಿದ ನಂತರ ಪೌರ ಕಾರ್ಮಿಕರು ಮಸ್ಟರಿಂಗ್ ಕೇಂದ್ರದ ಸಮೀಪದ ಪ್ರಾಥಮಿಕ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡವರು ಮಾತ್ರ ಅರ್ಧ ದಿನದ ವೇತನಸಹಿತ ರಜೆಗೆ ಅರ್ಹರು. ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಇಷ್ಪಪಡದವರ ಅರ್ಧ ದಿನ ರಜೆಯನ್ನು ವೇತನರಹಿತ ರಜೆ ಎಂದೇ ಪರಿಗಣಿಸಲಾಗುತ್ತದೆ ಎಂದು ವಿಶೇಷ ಆಯುಕ್ತ (ಕಸ ನಿರ್ವಹಣೆ) ರಂದೀಪ್‌ ಅವರು ಆದೇಶ ಮಾಡಿದ್ದಾರೆ.

ಕೋವಿಡ್‌ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದ 4,094 ಸಿಬ್ಬಂದಿಗೆ ಗುರುವಾರ ಲಸಿಕೆ ಹಾಕಲು ಉದ್ದೇಶಿಸಲಾಗಿತ್ತು. ಆದರೆ 1,037 ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡರು. 1,437 ಮಂದಿ ಆರೋಗ್ಯ ಕಾರ್ಯಕರ್ತರು ಗುರುವಾರ ಲಸಿಕೆ ಪಡೆಯಬೇಕಿತ್ತು. ಆದರೆ ಲಸಿಕೆ ಹಾಕಿಸಿಕೊಂಡಿದ್ದು 393 ಮಂದಿ ಮಾತ್ರ. ಲಸಿಕೆ ಹಾಕಿಸಿಕೊಳ್ಳಲು ಮಾರ್ಷಲ್‌ಗಳು ತುಸು ಉತ್ಸಾಹ ತೋರಿದರು. ಒಟ್ಟು 211 ಮಾರ್ಷಲ್‌ಗಳು ಲಸಿಕೆ ಪಡೆದರು.

ಮೊದಲು ಗೊತ್ತುಪಡಿಸಿದ್ದ ಒಟ್ಟು 5,531ರಲ್ಲಿ 1430 ಮಂದಿ ಗುರುವಾರ ಲಸಿಕೆ ಪಡೆದರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು