ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ಪೋಷಿಸುವ ವಾಗ್ದಾನ ಮಾಡಿದ ಮಕ್ಕಳು

Last Updated 18 ಜೂನ್ 2019, 19:45 IST
ಅಕ್ಷರ ಗಾತ್ರ

ನಾಲ್ವರು ಮಕ್ಕಳ ಒಂದು ತಂಡ ತಾವೇ ಗುಂಡಿ ತೆಗೆದು, ಅದರಲ್ಲಿ ಸಸಿ ನೆಟ್ಟು, ನೀರು ಹಾಕಿದರು. ಇದೇ ರೀತಿ ಹತ್ತಾರು ತಂಡಗಳು ಗಿಡ ನೆಟ್ಟು ಪೋಷಿಸುವ ವಾಗ್ದಾನ ಮಾಡಿದರು.

ಇದು ನೆಲಮಂಗಲ ತಾಲ್ಲೂಕಿನ ನರಸೀಪುರದ ಆತ್ಮಾರಾಮ ಪ್ರೌಢಶಾಲೆಯಲ್ಲಿ ಕಂಡುಬಂದ ದೃಶ್ಯ. ಬೆಂಗಳೂರಿನ ಮಾಚೋಹಳ್ಳಿಯ ಶ್ರೀ ವಾಣಿ ವಿದ್ಯಾ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮಕ್ಕಳು ಸೇರಿಕೊಂಡು 50ಕ್ಕೂ ಸಸಿಗಳನ್ನು ನೆಡುವ ಮೂಲಕ ’ವನಮಹೋತ್ಸವ’ ಆಚರಿಸಿದರು.

‘ನಾವು ಶಾಲೆಯಲ್ಲಿ ಇರುವವರೆಗೂ ಈ ಗಿಡಗಳ ಜವಾಬ್ದಾರಿ ಹೊತ್ತುಕೊಳ್ಳುತ್ತೇವೆ’ ಎಂದು ಮಕ್ಕಳು ಒಕ್ಕೊರಲಿನಿಂದ ಹೇಳಿದರು.

‘ಪರಿಸರ ದಿನಾಚಾರಣೆಯನ್ನು ಸಾಂಕೇತಿಕವಾಗಿ ಆಚರಿಸುವುದರ ಬದಲಾಗಿ, ನೆಟ್ಟ ಗಿಡಗಳನ್ನು ವರ್ಷಪೂರ್ತಿ ಪೋಷಿಸುವ ಜವಾಬ್ದಾರಿಯನ್ನು ಕೊಟ್ಟರೆ, ಮಕ್ಕಳು ಅದನ್ನು ಮನಸ್ಪೂರ್ತಿಯಾಗಿ ಮಾಡುತ್ತಾರೆ. ತಾವು ನೆಟ್ಟಿರುವ ಗಿಡ ಬೆಳೆಯುವುದನ್ನು ನೋಡಿ ಖುಷಿಪಡುತ್ತಾರೆ. ಆಗ ಪರಿಸರ ದಿನಕ್ಕೂ ಒಂದು ಅರ್ಥ ಸಿಗುತ್ತದೆ’ ಎಂದು ಮುಖ್ಯ ಶಿಕ್ಷಕ ಕೆ.ಜಿ.ಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT