ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಅರಣ್ಯ ವಿಭಾಗ: ನೆಟ್ಟ ಸಸಿ ಮರವಾದದ್ದಕ್ಕೆ ಲೆಕ್ಕವಿಲ್ಲ

ಬಿಬಿಎಂಪಿ ಅರಣ್ಯ ವಿಭಾಗ: ಕಡಿಯಲು ಮುಂದೆ; ಬೆಳೆಸಿ, ರಕ್ಷಿಸುವಲ್ಲಿ ಹಿಂದೆ
Last Updated 14 ನವೆಂಬರ್ 2022, 13:43 IST
ಅಕ್ಷರ ಗಾತ್ರ

ಬೆಂಗಳೂರು: ಲಕ್ಷಾಂತರ ಸಸಿಗಳನ್ನು ನೆಡಲಾಗಿದೆ. ಯಾವ ವರ್ಷ ಎಷ್ಟು ಎಂಬುದೂ ದಾಖಲಾಗಿದೆ. ಆದರೆ,ಅವುಗಳೆಲ್ಲಮರವಾಗಿವೆಯೇ,ರಕ್ಷಣೆಯಾಗುತ್ತಿವೆಯೇಎಂಬ ಮಾಹಿತಿ ಮಾತ್ರಬಿಬಿಎಂಪಿಅರಣ್ಯ ವಿಭಾಗದಲ್ಲಿ ಇಲ್ಲ.

ಬಿಬಿಎಂಪಿಅರಣ್ಯ ವಿಭಾಗ ನಗರದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಬೃಹತ್‌ ಮರಗಳನ್ನುಧರೆಗುರುಳಿಸುತ್ತದೆ. ಒಂದು ಮರಕ್ಕೆ ಬದಲಾಗಿ 10 ಸಸಿಗಳನ್ನು ನೆಡಲಾಗುತ್ತಿದೆಎಂದೂ ಹೇಳುತ್ತದೆ. ಆ ಸಸಿಗಳು ಎಲ್ಲಿವೆ,ಮರವಾಗಿರುವುದುಎಷ್ಟು ಎಂದರೆ ಅರಣ್ಯ ವಿಭಾಗದ ಅಧಿಕಾರಿಗಳುಮತ್ತೊಬ್ಬಅಧಿಕಾರಿಗಳತ್ತ ಬೊಟ್ಟು ಮಾಡುತ್ತಾರೆ.

ಕಡಿದ ಮರಕ್ಕೆ ಪ್ರತಿಯಾಗಿ ಸಸಿಗಳನ್ನು ಎಲ್ಲಿ ನೆಡಲಾಗಿದೆ ಎಂಬ ಪ್ರಶ್ನೆಗೆ,‘ಉದ್ಯಾನ, ತೆರೆದ ಪ್ರದೇಶ ಎಲ್ಲಿ ಸಿಗುತ್ತೋ ಅಲ್ಲಿ ಹಾಕಿದ್ದೇವೆ’ ಎಂಬ ಹಾರಿಕೆಯ ಉತ್ತರ ಅರಣ್ಯ ವಿಭಾಗದಿಂದ ಬರುತ್ತದೆ.

ಮಾಹಿತಿ ಇಲ್ಲ:ಬಿಬಿಎಂಪಿಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್‌ ಅವರಲ್ಲಿ ಸಸಿ ನೆಟ್ಟ, ನಿರ್ವಹಣೆಯ ಮಾಹಿತಿ ಕೇಳಿದಾಗ, ‘ವಿಭಾಗದ ವ್ಯವಸ್ಥಾಪಕರಲ್ಲಿ ಪಡೆಯಿರಿ’ ಎಂದರು. ವ್ಯವಸ್ಥಾಪಕರು, ‘ವೃಕ್ಷ ಅಧಿಕಾರಿಯವರಲ್ಲಿ ಮಾಹಿತಿ ಇದೆ’ ಎಂದರು. ಒಬ್ಬರು ಮರ ಕತ್ತರಿಸಿದ ಮಾಹಿತಿ ನೀಡಿದರು. ಮತ್ತೊಬ್ಬರು ಸಸಿ ನೆಟ್ಟ ವಿವರ ನೀಡಿದರಷ್ಟೆ. ನೆಟ್ಟ ಸಸಿ ಮರವಾದ ಬಗ್ಗೆ ಮಾತ್ರ ಯಾರಲ್ಲಿಯೂ ಮಾಹಿತಿ ಇಲ್ಲ.

ಎಲ್ಲಿ ಹೋದವು ಸಸಿ?: ‘ಗ್ರೀನ್‌ ಸಿಟಿ’ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರಿನಲ್ಲಿ ಪರಿಸರ ದಿನಸೇರಿ ಹಲವು ಸಂದರ್ಭಗಳಲ್ಲಿಬಿಬಿಎಂಪಿ, ಸರ್ಕಾರದ ಹಲವು ಇಲಾಖೆಗಳುಸೇರಿದಂತೆಸಂಘ–ಸಂಸ್ಥೆಗಳು ಲಕ್ಷಾಂತರ ಸಸಿಗಳನ್ನುನೆಡುತ್ತಿವೆ. ಆದರೆ, ಆ ಪ್ರಮಾಣದ ಮರಗಳು ಕಾಣಸಿಗುತ್ತಿಲ್ಲ. ಕೆಲವು ಅಧ್ಯಯನಗಳ ಪ್ರಕಾರ ಸುಮಾರು 20 ಲಕ್ಷ ಮರಗಳುನಗರದಲ್ಲಿವೆ. 2014ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಪ್ರಕಾರ 14.78 ಲಕ್ಷ, 2016ರಿಂದಬಿಬಿಎಂಪಿಅರಣ್ಯ ವಿಭಾಗ 4.73 ಲಕ್ಷ ಸಸಿಗಳನ್ನು ನೆಟ್ಟಿದೆ.

ಬಿಬಿಎಂಪಿಅರಣ್ಯ ವಿಭಾಗದಿಂದ ಗುತ್ತಿಗೆ ಪಡೆದವರುಒಂದು ಸಸಿ ನೆಟ್ಟು ಅದನ್ನು ಎರಡು ವರ್ಷ ಪೋಷಿಸಿದರೆ ₹900 ಪಡೆಯುತ್ತಾರೆ. ಲಕ್ಷಾಂತರ ಸಸಿ ನೆಟ್ಟ ಬಗ್ಗೆ ದಾಖಲೆಪುಸ್ತಕವಿದೆ. ಆದರೆ,ಮರವಾಗಿರುವಬಗ್ಗೆ ದಾಖಲೆ ಇಲ್ಲ.

ಮರಗಣತಿಯಾಗಲಿ...

ನಗರದಲ್ಲಿ ಮರಗಳಗಣತಿಯಾಗಬೇಕು.ಇದರಿಂದಹಲವು ವರ್ಷಗಳಿಂದ ಇರುವಮರಗಳೆಷ್ಟು, ಹೊಸದಾಗಿ ನೆಟ್ಟಿರುವ ಸಸಿಗಳುಮರವಾಗಿರುವಲೆಕ್ಕಗಳೆಲ್ಲಸಿಗುತ್ತದೆ. ಪ್ರತಿ 6 ತಿಂಗಳಿಗೆ ಮರಗಳ ಗಣತಿಯ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ವಾಸ್ತವದಲ್ಲಿ ಎಲ್ಲಿಸಸಿಗಳಿವೆ, ಮರಗಳಿಗೆಎಂಬುದುಡಿಜಿಟಲ್‌ ದಾಖಲೆ ಇರಬೇಕು ಎಂದು ಪರಿಸರ ಕಾರ್ಯಕರ್ತ ವಿಜಯ್‌ನಿಶಾಂತ್ಒತ್ತಾಯಿಸಿದರು.

ಸಸಿಗಳು ಪರಿಹಾರವಲ್ಲ...

‘ಬೃಹತ್‌ ಮರವೊಂದನ್ನು ಕಡಿದುಹಾಕಿ, ಅದರ ಬದಲು ಎಷ್ಟೇ ಸಂಖ್ಯೆಯ ಸಸಿಗಳನ್ನು ನೆಟ್ಟರೂ ಅದಕ್ಕೆ ಪರಿಹಾರವಾಗುವುದಿಲ್ಲ.
ಪ್ರತಿಯೊಂದು ಮರಕ್ಕೂ ತನ್ನದೇ ಮೌಲ್ಯವಿದೆ. ಎಲ್ಲವನ್ನೂ ರಕ್ಷಿಸಬೇಕು. ಬಿಬಿಎಂಪಿಯ ಅರಣ್ಯ ವಿಭಾಗ ಮೂರ್ನಾಲ್ಕು ಮೀಟರ್‌ ಎತ್ತರದ ದೊಡ್ಡ ಮರಗಳ ಪಟ್ಟಿಯನ್ನು ನೀಡುತ್ತದೆ. ಮರ ಕಡಿಯಲು ಸಾರ್ವಜನಿಕ ಪ್ರಕಟಣೆ ನೀಡುವ ಮುನ್ನ ವಾಸ್ತವವನ್ನು ಅರಿತುಕೊಳ್ಳಬೇಕು’ ಎಂದು ಸಿಟಿಜನ್‌ ಫಾರ್ ಸಿಟಿಜನ್ಸ್‌ ಸಂಸ್ಥಾಪಕ ರಾಜ್‌ಕುಮಾರ್ ದುಗಾರ್‌ ಹೇಳಿದರು.

ಅಲ್ಲೇ ಸಸಿ ನೆಡಿ

‘ನಗರದಲ್ಲಿ ಮರಗಳ ರಕ್ಷಣೆ ಬಿಬಿಎಂಪಿಯ ಕರ್ತವ್ಯ. ಬಿಎಂಆರ್‌ಸಿಎಲ್‌, ಕೆಆರ್‌ಡಿಸಿಲ್‌, ರೈಲ್ವೆ ಸೇರಿದಂತೆ ಯಾವುದೇ ಯೋಜನೆಗಾಗಿ ಮರಗಳನ್ನು ಕಡಿಯುವ ಸುತ್ತಮತ್ತಲಿನ ಪ್ರದೇಶದಲ್ಲೇ ಸಸಿಗಳನ್ನು ನೆಡಬೇಕು’ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ವ್ಯವಸ್ಥಾಪಕ ವಿನೋದ್‌ ಜಾಕೋಬ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT