ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಮುಖ ಸಂಚಾರ: ಪಿಎಸ್‌ಐ, ಕಾನ್‌ ಸ್ಟೆಬಲ್ ಮೇಲೆ ಹಲ್ಲೆ

Last Updated 1 ಮಾರ್ಚ್ 2020, 19:43 IST
ಅಕ್ಷರ ಗಾತ್ರ

ಬೆಂಗಳೂರು: ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿರುವ ರಸ್ತೆಯಲ್ಲಿ ವಾಹನವನ್ನು ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಮಡಿವಾಳ ಠಾಣೆ ಪಿಎಸ್‌ಐ ಟಿ.ಡಿ. ಜಯರಾಮು (59) ಹಾಗೂ ಕಾನ್‌ ಸ್ಟೆಬಲ್ ಧನಂಜಯ ಮೇಲೆ ಹಲ್ಲೆ ಮಾಡ ಲಾಗಿದ್ದು, ಈ ಸಂಬಂಧ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹಲ್ಲೆ ಸಂಬಂಧ ಜಯರಾಮು ದೂರು ನೀಡಿದ್ದಾರೆ. ‌ದೊಡ್ಡನೆಕ್ಕುಂದಿಯ ಸಂತೋಷ್, ಲೋಕೇಶ್ ಹಾಗೂ ಮಿಥುನ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜಯರಾಮು ಹಾಗೂ ಧನಂಜಯ ಅವರು ಫೆ. 27ರಂದು ಬೆಳಿಗ್ಗೆ ಬೊಮ್ಮನ ಹಳ್ಳಿ ವೃತ್ತದಲ್ಲಿ ಕರ್ತವ್ಯದಲ್ಲಿದ್ದರು. ಮಂಗಮ್ಮನಪಾಳ್ಯ ಕಡೆಯಿಂದ ಬೊಮ್ಮ ನಹಳ್ಳಿ ಕಡೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿದ್ದ ರಸ್ತೆಯಲ್ಲಿ ಆರೋಪಿಗಳು ವಿರುದ್ಧ ದಿಕ್ಕಿನಲ್ಲಿ ಬೈಕ್‌ ಚಲಾಯಿಸಿಕೊಂಡು ಬಂದಿದ್ದರು. ಪೊಲೀಸರು ಬೈಕ್ ತಡೆದು ಪ್ರಶ್ನಿಸಿದ್ದರು. ಅಷ್ಟಕ್ಕೆ ಆರೋಪಿಗಳು, ಪಿಎಸ್ಐ ಹಾಗೂ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ತಿಳಿಸಿದರು.

‘ಗಾಯಗೊಂಡ ಪಿಎಸ್ಐ ಹಾಗೂ ಕಾನ್‌ಸ್ಟೆಬಲ್, ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT