ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ತಡೆ | ‘ಪೊಲೀಸ್–ಪಬ್ಲಿಕ್ ಬೀಟ್’ ಜಾರಿಗೆ ಚಿಂತನೆ: ಬಿ.ದಯಾನಂದ್

Published 23 ಮಾರ್ಚ್ 2024, 15:27 IST
Last Updated 23 ಮಾರ್ಚ್ 2024, 15:27 IST
ಅಕ್ಷರ ಗಾತ್ರ

ಬೆಂಗಳೂರು: ‘ಮನೆಗಳಲ್ಲಿ ಕಳ್ಳತನ, ಸರಕಳವು ಸೇರಿ ಹಲವು ಅಪರಾಧಗಳ ತಡೆಗೆ ಸಾರ್ವಜನಿಕರ ನೆರವಿನಲ್ಲಿ ‘ಪೊಲೀಸ್–ಪಬ್ಲಿಕ್ ಬೀಟ್’ ಜಾರಿಗೆ ಚಿಂತನೆ ನಡೆದಿದೆ’ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ್ ಹೇಳಿದರು.

ಮಹಾಲಕ್ಷ್ಮಿ ಲೇಔಟ್‌ನಲ್ಲಿ ಶನಿವಾರ ನಡೆದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

‘ಪೊಲೀಸರ ಜೊತೆ ಸ್ವಯಂಸೇವಕರಾಗಿ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಅವಕಾಶ ಕೊಡಿ’ ಎಂಬ ಸಭಿಕರೊಬ್ಬರ ಕೋರಿಕೆ ಪ್ರತಿಕ್ರಿಯಿಸಿ, ‘ಹಿಂದೆ ನೆರೆ–ಹೊರೆ ಬೀಟ್ ಇತ್ತು. ಕೆಲವರು ದುರ್ಬಳಕೆ ಮಾಡಿಕೊಂಡಿದ್ದರಿಂದ ರದ್ದು ಮಾಡಲಾಗಿತ್ತು. ಮತ್ತೆ ಚಾಲನೆ ನೀಡುವ ಚಿಂತನೆ ಇದೆ’ ಎಂದು ತಿಳಿಸಿದರು. 

ಬೆರಳಚ್ಚು ಉಪಕರಣ ನೀಡಿ: ‘ಪೊಲೀಸರ ಬಳಿ ಇರುವ ಬೆರಳಚ್ಚು ಪರಿಕರವನ್ನು ನಮಗೂ ಕೊಡಿ. ಆಭರಣ ಅಡವಿರಿಸಲು ಬರುವವರ ಬೆರಳಚ್ಚು ಪರೀಕ್ಷಿಸಿ, ಮಾಹಿತಿ ನೀಡುತ್ತೇವೆ’ ಎಂದು ಮಳಿಗೆ ಮಾಲೀಕರೊಬ್ಬರು ಹೇಳಿದರು.

ದಯಾನಂದ್, ‘ಇದೊಂದು ಒಳ್ಳೆಯ ಸಲಹೆ. ಪರಿಶೀಲಿಸಲಾಗುವುದು’ ಎಂದರು. ಸಭೆಯಲ್ಲಿ ಡಿಸಿಪಿಗಳಾದ ಸೈದುಲು ಅಡಾವತ್ ಹಾಗೂ ಸಿರಿ ಗೌರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT