ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಬೇಕಿದೆ ವೈಪರೀತ್ಯ ಮೀರುವ ತಂತ್ರಜ್ಞಾನ’

Published : 18 ಡಿಸೆಂಬರ್ 2018, 19:57 IST
ಫಾಲೋ ಮಾಡಿ
Comments

ಬೆಂಗಳೂರು:‘ಹವಾಮಾನ ವೈಪರೀತ್ಯದಿಂದ ಸೌರ ಮತ್ತು ಪವನ ವಿದ್ಯುತ್‌ ಉತ್ಪಾದನೆ ಒಂದುಸವಾಲಾಗಿ ಪರಿಣಮಿಸಿದೆ. ಅದನ್ನು ಮೀರಿ ನಿಲ್ಲಲು ಹೊಸ ತಂತ್ರಜ್ಞಾನಗಳತ್ತ ಗಮನಹರಿಸಬೇಕಿದೆ’ ಎಂದು ಇನ್ಸ್‌ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರ್ಸ್‌ನ (ಐಇಇಇ) ಪಿಇಎಸ್‌ ಅಧ್ಯಕ್ಷ ಡಾ.ಎಸ್‌.ರೆಹಮಾನ್‌ ಅಭಿಪ್ರಾಯಪಟ್ಟರು.

ನಗರದಲ್ಲಿಪವರ್‌ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಕನ್ಸಲ್ಟೆಂಟ್ಸ್‌(ಪಿಆರ್‌ಡಿಸಿ) ಸಂಸ್ಥೆ ಮಂಗಳವಾರ ಆಯೋಜಿಸಿದ್ದ ‘ವಿದ್ಯುತ್‌ ಕ್ಷೇತ್ರದ ಹೊಸ ಪರಿಪಾಠಗಳು’ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಜಾಗತಿಕ ಮಟ್ಟದಲ್ಲಿ ಭಾರತ, ಪವನಶಕ್ತಿ ಉತ್ಪಾದನೆಯಲ್ಲಿ ನಾಲ್ಕನೇ ಹಾಗೂ ಸೌರಶಕ್ತಿ ಉತ್ಪಾದನೆಯಲ್ಲಿ ಐದನೇ ಸ್ಥಾನದಲ್ಲಿದೆ. ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕಮೊದಲ ಸ್ಥಾನದತ್ತ ಮುನ್ನುಗ್ಗಬೇಕು’ ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಪವನಶಕ್ತಿ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ.ಕೆ.ಬಲರಾಮನ್‌, ‘ಅನಿರೀಕ್ಷಿತ ಲೋಡ್‌ ಶೆಡ್ಡಿಂಗ್‌ಗಳನ್ನು ತಪ್ಪಿಸಲು ವಿದ್ಯುತ್‌ ಸಂಗ್ರಹ ಸಾಮರ್ಥ್ಯವನ್ನು ವೃದ್ಧಿಸಬೇಕಿದೆ’ ಎಂದು ಆಶಿಸಿದರು.

ಪಿಆರ್‌ಡಿಸಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್.ನಾಗರಾಜ ಮಾತನಾಡಿ, ರಾಜ್ಯದೆಲ್ಲೆಡೆ ಪ್ರತಿ ಮನೆಯಲ್ಲೂ ಸ್ಮಾರ್ಟ್‌ ಮೀಟರ್‌ ಅಳವಡಿಸಬೇಕು. ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಸರ್ಕಾರ ಹೆಚ್ಚಿನ ಸಬ್ಸಿಡಿ ನೀಡಿ ಪ್ರೋತ್ಸಾಹಿಸಬೇಕು. ಇದರಿಂದಉಷ್ಣ ಶಕ್ತಿಯ ಅವಲಂಬನೆ ತಗ್ಗಲಿದ್ದು, ‌ಸ್ಮಾರ್ಟ್‌ ಗ್ರಿಡ್‌ ಮತ್ತು ಸ್ಮಾರ್ಟ್‌ ಸಿಟಿ ಯೋಜನೆಗಳಿಗೆ ನೆರವಾಗಲಿದೆ. ಸರ್ಕಾರ, ಪ್ರತಿ ಹಳ್ಳಿಗಳಲ್ಲಿ ಸೌರ, ಪವನಶಕ್ತಿ ಬಳಕೆ ಕುರಿತು ಜಾಗೃತಿ, ಉತ್ತೇಜನ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT