ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿ–ಫಿಕ್ಸ್ಡ್‌ ಆಟೊ ಕೌಂಟರ್‌ ಆರಂಭ

Last Updated 23 ನವೆಂಬರ್ 2022, 18:21 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹಂತ–ಹಂತವಾಗಿ ಪ್ರಿ–ಫಿಕ್ಸ್ಡ್‌(ಪೂರ್ವ ನಿಗದಿತ ದರ) ಆಟೊರಿಕ್ಷಾ ಕೌಂಟರ್‌ಗಳನ್ನು ಪುನರ್ ಆರಂಭಿಸಲು ಸಂಚಾರ ಪೊಲೀಸರು ಮುಂದಾಗಿದ್ದು, ಎಂ.ಜಿ. ರಸ್ತೆಯಲ್ಲಿ ಈ ಕೌಂಟರ್ ಮತ್ತೆ ತೆರೆದಿದ್ದಾರೆ.

ಕೋರಮಂಗಲದ ಫೋರಂ ಮಾಲ್, ಕಮರ್ಷಿಯಲ್ ಸ್ಟ್ರೀಟ್, ಮೆಜೆಸ್ಟಿಕ್‌ ಬಳಿ ಈ ಕೌಂಟರ್‌ಗಳು ಶೀಘ್ರವೇ ಮರು ಚಾಲನೆ ಪಡೆದುಕೊಳ್ಳಲಿವೆ. ‘ಚಾಲಕರು ಹೆಚ್ಚಿನ ದರ ಪಡೆಯುವುದಕ್ಕೆ ಇದರಿಂದ ಕಡಿವಾಣ ಬೀಳಲಿದೆ. ಪ್ರಿ–ಫಿಕ್ಸ್ಡ್‌ ಮತ್ತು ಪ್ರಿ–‍ಪೇಯ್ಡ್‌ ಕೌಂಟರ್‌ಗಳಲ್ಲಿ ಪ್ರಯಾಣ ದರಪಟ್ಟಿಗಳನ್ನು ಹಿಡಿದು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ’ ಎಂದು ನಗರದ ಪೊಲೀಸ್ ವಿಶೇಷ ಆಯುಕ್ತ(ಸಂಚಾರ) ಎಂ. ಅಬ್ದುಲ್‌ ಸಲೀಂ ತಿಳಿಸಿದರು.

‘ಈಗಾಗಲೇ ಇರುವ ಪ್ರಿ–ಪೇಯ್ಡ್ ಕೌಂಟರ್‌ಗಳಿಗೆ ಮರು ಚಾಲನೆ ನೀಡಲು ಬೆಂಗಳೂರು ಮೆಟ್ರೊ ರೈಲು ನಿಗಮದ ಜತೆ ಒಟ್ಟಾಗಿ ಕೆಲಸ ಮಾಡಲಿದ್ದೇವೆ. ಜನನಿಬಿಡ ಮತ್ತು ಮೆಟ್ರೊ ನಿಲ್ದಾಣಗಳಲ್ಲಿ ಪ್ರಿ–ಫಿಕ್ಸ್ಡ್‌ ಕೌಂಟರ್‌ಗಳು ಕಾರ್ಯಾರಂಭವಾಗಲಿವೆ. ಪ್ರಯಾಣಿಕರು ಕೊನೆಯ ತಾಣಗಳನ್ನು ತಲುಪಲು ಇದರಿಂದ ಅನುಕೂಲ ಆಗಲಿದೆ. ಪ್ರಯಾಣಿಕರಿಂದಲೂ ಇದಕ್ಕೆ ಒತ್ತಡವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT