ಬೆಂಗಳೂರು: ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಸಾರ್ವಭೌಮರಲ್ಲ, ಆ ಸಂಸ್ಥೆಗಳ ವೃತ್ತಿಪರ ಕೋರ್ಸ್‌ಗಳಿಗೆ ಶುಲ್ಕ ನಿಗದಿ ಮಾಡುವ ಅಧಿಕಾರವಿದೆ ಎಂದು ವೃತ್ತಿಪರ ಕೋರ್ಸ್‌ಗಳ ಶುಲ್ಕ ನಿಗದಿ ಸಮಿತಿ ಅಧ್ಯಕ್ಷ ನ್ಯಾ.ಶೈಲೇಂದ್ರಕುಮಾರ್ ಹೇಳಿದ್ದಾರೆ.

ಒಂದು ವೇಳೆ ನಿರಾಕರಿಸಿದರೆ ಕ್ರಮ ತೆಗದುಕೊಳ್ಳುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಪ್ರತಿ ವರ್ಷ ಲೆಕ್ಕ ಪತ್ರ ಒಪ್ಪಿಸಬೇಕು. ಆದರೆ, ಅವರು ಲೆಕ್ಕ ಒಪ್ಪಿಸುತ್ತಿಲ್ಲ. ತಾವು ಸರ್ಕಾರದ ಹಿಡಿತದ ವ್ಯಾಪ್ತಿಗೆ ಬರುವುದಿಲ್ಲ ಎಂದು ಭಾವಿಸಬೇಕಿಲ್ಲ. ಸರ್ಕಾರ ನಿಯಮಗಳು ಈ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದರು.

ಅಧಿಕ ಶುಲ್ಕ ವಸೂಲಿ ಮಾಡಿದ ದೂರಿನ ಮೇಲೆ ಟಿ.ಜಾನ್ ಮತ್ತು ರೇವಾ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.