ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಉದ್ಯಮದ ಸವಾಲುಗಳನ್ನು ಎದುರಿಸಿ: ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್

Published 27 ಏಪ್ರಿಲ್ 2024, 16:01 IST
Last Updated 27 ಏಪ್ರಿಲ್ 2024, 16:01 IST
ಅಕ್ಷರ ಗಾತ್ರ

ಕೆ.ಆರ್.ಪುರ: ‘ಎಂಜಿನಿಯರಿಂಗ್‌ನಲ್ಲಿ ನಾವೀನ್ಯದ ಮಹತ್ವವನ್ನು ತಿಳಿದುಕೊಂಡು ಉತ್ತಮವಾದುದನ್ನು ಸಾಧಿಸಬೇಕು’ ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದರು.

ಕೆ.ಆರ್.ಪುರ ಸಮೀಪದ ವೈಟ್‌ಫೀಲ್ಡ್‌ನ‌ ಎಂವಿಜೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಪ್ರಾಜೆಕ್ಟ್ ಎಕ್ಸ್‌ಪೊ’ 2024’ ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಸ್ಯೆ ಪರಿಹರಿಸುವ ಕೌಶಲಗಳು, ಉದ್ಯಮದ ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಹಯೋಗದ ಪ್ರಾಮುಖ್ಯವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಅನಿಶ್ಚಿತತೆಯ ಸಮಯದಲ್ಲಿ ಅಭಿವೃದ್ಧಿ ಹೊಂದಲು ತಾಂತ್ರಿಕ ವಿಷಯಗಳು‌ ಮುಖ್ಯವಾಗಿವೆ. ಅನನ್ಯತೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು  ‘ಪ್ರಾಜೆಕ್ಟ್ ಎಕ್ಸ್‌ಪೊ’ ಮಹತ್ವದ್ದಾಗಿದೆ ಎಂದರು.

ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಡಾ.ಬಿ.ಎನ್.ಸುರೇಶ್ ಮಾತನಾಡಿ, ‘ಸಾಮಾಜಿಕ ಸಮಸ್ಯೆಗಳಿಗೆ ಎಂಜಿನಿಯರಿಂಗ್ ಪರಿಹಾರಗಳನ್ನು ಗುರುತಿಸುತ್ತದೆ. ಆಳವಾದ ಸಾಮಾಜಿಕ ಬದಲಾವಣೆಗಳನ್ನು ಪ್ರಚೋದಿಸುತ್ತದೆ. ಸಮಕಾಲೀನ ನಾವೀನ್ಯತೆ ಮತ್ತು ಆವಿಷ್ಕಾರಗಳನ್ನು ನಿರ್ಲಕ್ಷಿಸುವ ರಾಷ್ಟ್ರಗಳು ಅಸ್ತಿತ್ವವಾದದ ಸವಾಲುಗಳನ್ನು ಎದುರಿಸಬಹುದು’ ಎಂದು ಎಚ್ಚರಿಸಿದರು.

ಪ್ರಾಜೆಕ್ಟ್ ಎಕ್ಸ್‌ಪೋದಲ್ಲಿ 123 ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಯಿತು. ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಎಂಜಿನಿಯರಿಂಗ್ ಉತ್ಸಾಹಿಗಳು ‘ಪ್ರಾಜೆಕ್ಟ್ ಎಕ್ಸ್‌ಪೊ’ ವೀಕ್ಷಿಸಿದರು. ಏರೋನಾಟಿಕಲ್, ವೈದ್ಯಕೀಯ, ಎಐ ಮತ್ತು ಇತರ ಎಂಜಿನಿಯರಿಂಗ್ ಕ್ಷೇತ್ರದ ಎಲ್ಲ ಪ್ರಾಜೆಕ್ಟ್ ನವೀನ ಯೋಜನೆಗಳನ್ನು ಪ್ರದರ್ಶಿಸಲಾಯಿತು.

450 ವಿದ್ಯಾರ್ಥಿಗಳಿಗೆ, ಉದಯೋನ್ಮುಖ ನವೋದ್ಯಮಿಗಳಿಗೆ ಎಕ್ಸ್‌ಪೊ ವೇದಿಕೆಯಾಯಿತು. ಕಾರ್ಯಕ್ರಮದಲ್ಲಿ ‘ಬಿಯಾಂಡ್ ಬೌಂಡರೀಸ್’ ಶೀರ್ಷಿಕೆಯ ಪುಸ್ತಕ ಮತ್ತು ವಿನೂತನ ವಿಚಾರಗಳ ಸಂಗ್ರಹಗಳ ಪುಸ್ತಕ ಬಿಡುಗಡೆ ಮಾಡಲಾಯಿತು.

ದೆಹಲಿ ಐಐಟಿ ಪ್ರಾಧ್ಯಾಪಕ ರಾಮಕೃಷ್ಣ ಸೋಂಡೆ, ಎಸ್.ರಾಜಗೋಪಾಲ್, ಆಕ್ಸೆಂಚರ್ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ,  ‘ಪ್ರಾಜೆಕ್ಟ್ ಎಕ್ಸ್‌ಪೊ’ ಸಂಚಾಲಕ ಶ್ರೀನಿವಾಸ್ ಗೊಂಬಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT