ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ರಾಘವೇಂದ್ರ ಬ್ಯಾಂಕ್‌ ಹಗರಣ: ಸಿಬಿಐ ತನಿಖೆ ನಡೆಸದಿದ್ದರೆ ಆಮರಣಾಂತ ಉಪವಾಸ

ಗುರು ರಾಘವೇಂದ್ರ ಹಾಗೂ ವಸಿಷ್ಠ ಬ್ಯಾಂಕ್‌ ಹಗರಣ
Last Updated 6 ಮಾರ್ಚ್ 2022, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಶ್ರೀ ಗುರುರಾಘವೇಂದ್ರ ಕೋ–ಆ‍ಪರೇಟಿವ್‌ ಹಾಗೂ ವಸಿಷ್ಠ ಸೌಹಾರ್ದ ಸಹಕಾರಿ ಬ್ಯಾಂಕ್‌ಗಳಲ್ಲಿ ನಡೆದಿರುವ ಅವ್ಯವಹಾರದ ತನಿಖೆಯನ್ನು 15ರಿಂದ 20 ದಿನಗಳ ಒಳಗೆ ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ಸಂಸದ ತೇಜಸ್ವಿ ಸೂರ್ಯ ಹಾಗೂ ಬಸವನಗುಡಿ ಶಾಸಕ ಎಲ್‌.ರವಿಸುಬ್ರಹ್ಮಣ್ಯ ಅವರ ಮನೆ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಠೇವಣಿದಾರರು ಎಚ್ಚರಿಸಿದ್ದಾರೆ.

‘ಬ್ಯಾಂಕ್‌ಗಳಲ್ಲಿ ನಡೆದಿರುವ ಅವ್ಯವಹಾರದಿಂದಾಗಿ ನಾವು ಬೀದಿಗೆ ಬಿದ್ದಿದ್ದೇವೆ. ಈ ವಿಚಾರದಲ್ಲಿ ಶಾಸಕರು ಹಾಗೂ ಸಂಸದರು ನಮ್ಮ ಪರವಾಗಿ ನಿಲ್ಲಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಠೇವಣಿದಾರರು ಶಾಸಕ ರವಿಸುಬ್ರಹ್ಮಣ್ಯ ನಿವಾಸದ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.

‘ಅವ್ಯವಹಾರ ನಡೆದು 2 ವರ್ಷವಾದರೂ ಸರಿಯಾದ ತನಿಖೆ ನಡೆದಿಲ್ಲ. ನಮ್ಮ ಹಣ ಪೂರ್ಣಪ್ರಮಾಣದಲ್ಲಿ ಕೈಸೇರಿಲ್ಲ. ವಸಿಷ್ಠ ಬ್ಯಾಂಕ್‌ ಹಗರಣದ ಕುರಿತು ಶಾಸಕರು ಹಾಗೂ ಸಂಸದರು ಚಕಾರ ಎತ್ತುತ್ತಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

‘40 ನಿಮಿಷಗಳ ಬಳಿಕ ಶಾಸಕರ ಮನೆಗೆ ಬಂದ ತೇಜಸ್ವಿ ಸೂರ್ಯ ತಮಗೆ ಬೇಕಾದ 10 ಮಂದಿಯನ್ನು ಮನೆಯೊಳಗೆ ಕರೆದುಕೊಂಡು ಹೋದರು. ಸುಮಾರು 2 ಗಂಟೆಯಾದರೂ ಹೊರಗೆ ಬರಲಿಲ್ಲ. ನಮ್ಮ ಜೊತೆಗಿದ್ದ ವೃದ್ಧರು ಅವರು ಬರುವವರೆಗೂ ಪಾದಚಾರಿ ಮಾರ್ಗದ ಮೇಲೆ ಕಾದು ಕುಳಿತುಕೊಳ್ಳಬೇಕಾಯಿತು’ ಎಂದು ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆ ಮುಖ್ಯ ಪೋಷಕ ಡಾ.ಶಂಕರ ಗುಹಾ ದ್ವಾರಕನಾಥ್‌ ಬೆಳ್ಳೂರು ಆರೋಪಿಸಿದರು.

‘ತನಿಖೆಯನ್ನು ಸಿಬಿಐಗೆ ಏಕೆ ಒಪ್ಪಿಸುತ್ತಿಲ್ಲ? ಬ್ಯಾಂಕ್‌ ಹಾಗೂ ಸೊಸೈಟಿ ಅವ್ಯವಹಾರದ ವಿರುದ್ಧ ಏಕೆ ಧ್ವನಿ ಎತ್ತುತ್ತಿಲ್ಲ? ಡಿಐಸಿಜಿಸಿ ಹಣವನ್ನು ಕೊಡಿಸಿ ಅದನ್ನೇ ನಿಮ್ಮ ದೊಡ್ಡ ಸಾಧನೆ ಎಂಬಂತೆ ಏಕೆ ಬಿಂಬಿಸುತ್ತಿದ್ದೀರಿ? ಎಂಬ ಪ್ರಶ್ನೆಗಳಿಗೆ ಸಂಸದರು ಹಾಗೂ ಶಾಸಕರು ಉತ್ತರ ನೀಡಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT