ಗುರುವಾರ , ಮಾರ್ಚ್ 4, 2021
18 °C

ಹೆಚ್ಚುವರಿ ಪಿಯು ಉಪನ್ಯಾಸಕರ ನೇಮಕಾತಿಗೆ ಆಗ್ರಹಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ ಕರ್ನಾಟಕ ಹೋರಾಟಗಾರರು ಪದವಿಪೂರ್ವ ಶಿಕ್ಷಣ ಭವನದಲ್ಲಿ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು

ಬೆಂಗಳೂರು: ಪದವಿಪೂರ್ವ ಕಾಲೇಜುಗಳಿಗೆ ಉಪನ್ಯಾಸಕರ ನೇಮಕಾತಿಗಾಗಿ 2015ರಲ್ಲಿ ನೀಡಲಾದ ಅಧಿಸೂಚನೆಯ ಜತೆಗೆ, ಖಾಲಿ ಇರುವ ಇತರ ಹುದ್ದೆಗಳ ಭರ್ತಿಗಾಗಿ ಹೆಚ್ಚುವರಿ ಹುದ್ದೆಗಳನ್ನು ಸೇರಿಸಬೇಕು ಎಂದು ಆಗ್ರಹಿಸಿ ಕಲ್ಯಾಣಸ ಕರ್ನಾಟಕ ಹೋರಾಟಗಾರರು ಗುರುವಾರ ಇಲ್ಲಿ ಧರಣಿ ನಡೆಸಿದರು.

‘1,130 ಉಪನ್ಯಾಸಕರ ಹುದ್ದೆಗಳಿಗೆ ಮಾತ್ರ ನೇಮಕಾತಿ ನಡೆಯುತ್ತಿದೆ. ಆದರೆ 3.407 ಹುದ್ದೆಗಳು ಖಾಲಿ ಇವೆ. 2017ರಲ್ಲಿ ಹೊಸಬರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದರೂ, ಆ ಸಾಲಿನ ಖಾಲಿ ಹುದ್ದೆಗಳನ್ನು ಸೇರಿಸಲಿಲ್ಲ. 65 ಸಾವಿರಕ್ಕೂ ಅಧಿಕ ಮಂದಿ ಉಪನ್ಯಾಸಕರ ಹುದ್ದೆಗಾಗಿ ಪರೀಕ್ಷೆ ಬರೆದಿದ್ದು, ಈ ನೇಮಕಾತಿಯಲ್ಲೇ ಹೆಚ್ಚುವರಿ ಹುದ್ದೆಗಳನ್ನೂ ಸೇರಿಸಿದರೆ ಅದೆಷ್ಟೋ ಮಂದಿಗೆ ಉದ್ಯೋಗದ ಅವಕಾಶ ಸಿಗುತ್ತದೆ, ಜತೆಗೆ ಶೈಕ್ಷಣಿಕ ಗುಣಮಟ್ಟವೂ ಹೆಚ್ಚಲು ಕಾರಣವಾಗುತ್ತದೆ’ ಎಂದು ಧರಣಿ ನಿರತರು ಆಗ್ರಹಿಸಿದರು.

ಹೈದರಾಬಾದ್‌ ಕರ್ನಾಟಕ ಹೋರಾಟಗಾರ ಡಾ. ರಜಾಕ್‌ ಉಸ್ತಾದ್ ನೇತೃತ್ವದಲ್ಲಿ ಈ ಧರಣಿ ನಡೆಯಿತು. ಬಳಿಕ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು