ಬೆಂಗಳೂರು: ಅಶ್ಲೀಲ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಬಗ್ಗೆ ಆರೋಪಿ ರಾಜು ಎಂಬುವರ ವಿರುದ್ಧ, ಅವರ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾರೆ.

‘ಫ್ರೇಜರ್‌ಟೌನ್ ನಿವಾಸಿಯಾಗಿರುವ 39 ವರ್ಷದ ಮಹಿಳೆ ದೂರು ನೀಡಿದ್ದಾರೆ. ಪತಿ ರಾಜು ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಪುಲಿಕೇಶಿನಗರ ಠಾಣೆ ಮೂಲಗಳು ಹೇಳಿವೆ.

‘ದೂರುದಾರ ಮಹಿಳೆ, 2019ರಲ್ಲಿ ರಾಜು ಅವರನ್ನು ಮದುವೆಯಾಗಿದ್ದರು. ಅತ್ತಿಗುಪ್ಪೆಯ ಇಂದಿರಾ ಕಾಲೊನಿಯಲ್ಲಿ ದಂಪತಿ ವಾಸವಿದ್ದರು. ಮದ್ಯ ವ್ಯಸನಿಯಾಗಿದ್ದ ರಾಜು, ನಿತ್ಯವೂ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಪತ್ನಿ ಮೇಲೆ ಹಲ್ಲೆಯನ್ನೂ ಮಾಡಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದೂ ತಿಳಿಸಿವೆ.

‘ಪತಿ ಕಿರುಕುಳದಿಂದ ಬೇಸತ್ತಿದ್ದ ಮಹಿಳೆ, ತವರು ಮನೆಯವರಿಗೂ ವಿಷಯ ತಿಳಿಸಿದ್ದರು. ಆದರೆ, ಇತ್ತೀಚೆಗೆ ಮಹಿಳೆಯ ಶೀಲದ ಬಗ್ಗೆ ಆರೋಪಿ ಅನುಮಾನಪಡಲಾರಂಭಿಸಿದ್ದರು. ಮಹಿಳೆಯ ಪರಿಚಯಸ್ಥರಿಗೆ ಕರೆ ಮಾಡಿ, ‘ನನ್ನ ಪತ್ನಿಗೂ ನಿಮಗೂ ಏನು ಸಂಬಂಧ’ ಎಂದು ಕೇಳುತ್ತಿದ್ದರು.’

‘ಶೀಲದ ಬಗ್ಗೆ ಶಂಕಿಸಿ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಆರೋಪಿ, ಅಶ್ಲೀಲ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ಅದೇ ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದರು. ಜೀವ ಬೆದರಿಕೆಯನ್ನೂ ಹಾಕಿದ್ದರು.'

'ಮದುವೆ ಸಂದರ್ಭದಲ್ಲಿ ಮಹಿಳೆ ತವರು ಮನೆಯವರು, ಆರೋಪಿಗೆ ಕಾರು ಉಡುಗೊರೆ ನೀಡಿದ್ದರು. ಕಾರನ್ನೂ ಆರೋಪಿ ಮಾರಾಟ ಮಾಡಿದ್ದರು. ವರದಕ್ಷಿಣಿ ತರುವಂತೆಯೂ ಪೀಡಿಸುತ್ತಿದ್ದರು. ಈ ಸಂಗತಿ ಮಹಿಳೆ ನೀಡಿರುವ ದೂರಿನಲ್ಲಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.