ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರಿನ ಘಟಕ ಗ್ರಾಮದಿಂದ ಹೊರಗೆ

Last Updated 17 ಜುಲೈ 2018, 18:55 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟ ಹೋಬಳಿ ಕೆಂಪಾಪುರ ಗ್ರಾಮದಲ್ಲಿನಿರ್ಮಾಣವಾಗಿರುವ ಶುದ್ದನೀರಿನ ಘಟಕವು ಗ್ರಾಮದಿಂದ ಹೊರಗೆ ಇದ್ದು, ಗ್ರಾಮಸ್ಥರಿಗೆಸೌಲಭ್ಯ ಪಡೆಯುವುದುಕಷ್ಟವಾಗಿದೆ. ನೀರಿನ ಘಟಕ ಇದ್ದು, ಉಪಯೋಗಕ್ಕೆ ಬಾರದಂತಾಗಿದೆ.
‘ಘಟಕವನ್ನು ಗ್ರಾಮದಿಂದ ಹೊರಗೆ ನಿರ್ಮಾಣ ಮಾಡಲಾಗಿದೆ. ಈ ಪ್ರದೇಶದಲ್ಲಿ ಸುಮಾರು 150 ಮನೆಗಳಿದ್ದು, ದ್ವಿಚಕ್ರವಾಹನ ಉಳ್ಳವರು ಮಾತ್ರ ಅದರ ಉಪಯೋಗ ಪಡೆಯುತ್ತಿದ್ದಾರೆ. ಉಳಿದಜನರು ಪಂಚಾಯಿತಿಯಿಂದ
ಬರುವ ಕೊಳವೆ ನೀರನ್ನೇ ಅವಲಂಬಿಸಿದ್ದಾರೆ.’ ಎಂದು ಗ್ರಾಮದ ನಿವಾಸಿಆರ್.ಕಿರಣ್ ಅಸಮಾಧಾನ ವ್ಯಕ್ತಪಡಿಸಿದರು.

‘ಕಳೆದ ಒಂದು ವರ್ಷದಿಂದ ಪರಿಶುದ್ದ ನೀರಿನ ಘಟಕವನ್ನು ಗ್ರಾಮದ ಒಳಗೆ ಸ್ಥಳಾಂತರ ಮಾಡಿಕೊಡುವಂತೆ ಕೋರಿದ್ದೇವೆ. ಆದರೆ, ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮದ ನಿವಾಸಿ ಸರೋಜಮ್ಮ ಆರೋಪಿಸಿದರು.

ಕಸಘಟ್ಟಪುರ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೆಂಕಟೇಶ್ ಪ್ರತಿಕ್ರಿಯಿಸಿ‘ಗ್ರಾಮದ ಒಳಗೆಘಟಕ ಸ್ಥಾಪಿಸಲು ಜಾಗವಿಲ್ಲದ ಕಾರಣ ಗ್ರಾಮದ ಹೊರಗೆ ಸ್ಥಾಪಿಸಲಾಯಿತು. ಜಾಗ ಕೊಟ್ಟರೆ ಖಂಡಿತ ಗ್ರಾಮದ ಒಳಗೆ ಸ್ಥಳಾಂತರಿಸಲಾಗುವುದು’ ಎಂದು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT