ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Namma Metro | ಮೆಟ್ರೊ ಫೀಡರ್‌ ಬಸ್‌ ಮಾಹಿತಿಗಾಗಿ ಕ್ಯೂಆರ್‌ ಕೋಡ್‌

Published 23 ಫೆಬ್ರುವರಿ 2024, 15:22 IST
Last Updated 23 ಫೆಬ್ರುವರಿ 2024, 15:22 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ‘ಮೆಟ್ರೊ ಫೀಡರ್‌ ಬಸ್‌’ಗಳ ಮಾಹಿತಿ ಒದಗಿಸಲು ಬಿಎಂಟಿಸಿ ಕ್ಯೂಆರ್‌ ಕೋಡ್‌ ಸೇವೆ ಪರಿಚಯಿಸಿದೆ.

40 ಮೆಟ್ರೊ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್‌ ಅಳವಡಿಸಲಾಗಿದ್ದು, ಪ್ರಯಾಣಿಕರು ಸ್ಕ್ಯಾನ್‌ ಮಾಡಿ ಮಾಹಿತಿ ಪಡೆಯಬಹುದು. ಮೆಟ್ರೊ ಫೀಡರ್‌ ಬಸ್‌ಗಳ ವೇಳಾಪಟ್ಟಿ, ಮಾರ್ಗ, ತಲುಪುವ ಸಮಯ ಸಹಿತ ವಿವಿಧ ಮಾಹಿತಿಗಳು ಇಲ್ಲಿ ದೊರೆಯಲಿವೆ.

ಮೆಟ್ರೊ ಫೀಡರ್‌ ಮಾರ್ಗಗಳಲ್ಲಿ 151 ಬಸ್‌ಗಳು ಕಾರ್ಯಾಚರಿಸುತ್ತಿವೆ. 300 ಬಸ್‌ ಕಾರ್ಯಾಚರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೆ ಮುಂದೆ ವಿಶೇಷ ಮಿನಿಬಸ್‌ಗಳನ್ನು ಬ್ರ್ಯಾಂಡ್‌ ಮಾಡಿ, ಕಾರ್ಯಾಚರಣೆಗೆ ಇಳಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT