ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಬೆಳವಣಿಗೆಗೆ ಪೋಷಕರು, ಶಿಕ್ಷಕರು ಜವಾಬ್ದಾರರು: ಡಾ.ಗುರುರಾಜ ಕರಜಗಿ

Last Updated 11 ಜೂನ್ 2022, 20:14 IST
ಅಕ್ಷರ ಗಾತ್ರ

ರಾಜರಾಜೇಶ್ವರಿ ನಗರ: ‘ಬಾಲ್ಯದಲ್ಲಿಯೇ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಚಿಂತನೆ ಹಾಗೂ ಮಾರ್ಗದರ್ಶನ ನೀಡಿದರೆ ಪ್ರತಿಭಾವಂತರಾಗಿ ಯಶಸ್ಸಿನ ಹಾದಿಯಲ್ಲಿ ನಡೆಯಲಿದ್ದಾರೆ’ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ತಿಳಿಸಿದರು.

ಕೋಣನಕುಂಟೆಯ ಸಿಲಿಕಾನ್ ಸಿಟಿ ಅಕಾಡೆಮಿ ಆಫ್ ಸೆಕೆಂಡರಿ ಎಜುಕೇಷನ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟೀಯ ಶಿಕ್ಷಣ ನೀತಿಯ ಅನುಭವ ಕಲಿಕೆಯ ಉದ್ಘಾಟಿಸಿ ಅವರು ಮಾತನಾಡಿದರು.

‘ಕಲಿಕೆ ಎಂಬುದು ಹರಿಯುವ ನೀರು. ಮಕ್ಕಳ ಬೆಳವಣಿಗೆಗೆ ಪೋಷಕರು-ಶಿಕ್ಷಕರು ಜವಾಬ್ದಾರರು. ಮನೆಯಲ್ಲಿ ಮಕ್ಕಳ ಚಲನವಲನದ ಮೇಲೆ ನಿಗಾವಹಿಸಿ, ಉತ್ತಮ ದಾರಿ ತೋರುವ ಮೂಲಕ ಮಕ್ಕಳನ್ನು ದೇಶದ ಆಸ್ತಿಗಳನ್ನಾಗಿ ಮಾಡಬೇಕು’ ಎಂದು ಕರೆ ನೀಡಿದರು.

ಸಿಲಿಕಾನ್ ಸಿಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಲ್.ರವಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡಬೇಕೆಂಬ ದೃಷ್ಟಿಯಿಂದ ನಮ್ಮ ಸಂಸ್ಥೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಂಡು ಕಲಿಕೆಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ’ ಎಂದರು. ಸಿಸಿಇ ಫಿನ್‌ಲ್ಯಾಂಡ್‌ನ ನಿರ್ದೇಶಕ ಹೇರಂಭ ಕುಲಕರ್ಣಿ ಮಾತನಾಡಿದರು. ಸಿಸಿಇ ಫಿನ್‌ಲ್ಯಾಂಡ್‌ ಶಿಕ್ಷಣ ನಾಯಕಿ ಸಿಮ್ರಾನ್ ಬಲ್ಲಾನಿ, ಪ್ರಾಂಶುಪಾಲರಾದ ಸುಮಾಲಿನಿ ಬಿ. ಸ್ವಾಮಿ, ಸಿಲಿಕಾನ್ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಅಧ್ಯಕ್ಷ ಸಮೀರ ಸಿಂಹ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT