ಬೆಂಗಳೂರು:ಇಲ್ಲಿನ ಜೆ.ಪಿ. ನಗರದ ಒಂದನೇ ಹಂತದಲ್ಲಿ ನಿರ್ಮಾಣವಾಗಿರುವ ಆಸ್ಟರ್ ಆರ್.ವಿ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಭಾನುವಾರ ಉದ್ಘಾಟಿಸಿದರು.

ದೇಶದಮೂರನೇ ಅತಿದೊಡ್ಡ ಆರೋಗ್ಯ ಸೇವಾ ಸಂಸ್ಥೆಯಾದ ಆಸ್ಟರ್ ಡಿಎಂ ಹೆಲ್ತ್ಕೇರ್ ಈ ಆಸ್ಪತ್ರೆಯನ್ನು ನಿರ್ಮಿಸಿದೆ. ಕೆಲವು ವರ್ಷಗಳ ಹಿಂದೆ ಹೆಬ್ಬಾಳದಲ್ಲಿ ಸಂಸ್ಥೆ ಆಸ್ಪತ್ರೆ ಆರಂಭಿಸಿತ್ತು. ನಗರದಲ್ಲಿ ಆರಂಭವಾಗಿರುವ ಸಂಸ್ಥೆಯ ಎರಡನೇ ಆಸ್ಪತ್ರೆ ಇದು. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತಜ್ಞ ವೈದ್ಯರು, ನುರಿತ ಸಿಬ್ಬಂದಿ ಇದ್ದಾರೆ.

ವಜುಭಾಯಿ ವಾಲಾ, ವಿಶ್ವದರ್ಜೆಯ ಚಿಕಿತ್ಸೆ ಈಗ ಬೆಂಗಳೂರಿನಲ್ಲಿಯೇ ಲಭ್ಯ. ದೇಶ–ವಿದೇಶಗಳಿಂದ ಜನ ಇಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಮಾತೃವಾತ್ಸಲ್ಯ ಹೊಂದಿರುವ ಮಹಿಳೆಯರು ಈ ಕ್ಷೇತ್ರಕ್ಕೆ ಹೆಚ್ಚು ಸೂಕ್ತ ಎಂದು ಹೇಳಿದರು.

ಆಸ್ಪತ್ರೆಯ ಸ್ಥಾಪಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಆಜಾದ್ ಮೂಪೆನ್ ಮಾತನಾಡಿ, ‘ಇದು ನಮ್ಮ ಸಂಸ್ಥೆಯ 25ನೇ ಆಸ್ಪತ್ರೆ. ನಾವು ಈಗ ದಕ್ಷಿಣ ಭಾರತದಲ್ಲಿ 4,573 ಹಾಸಿಗೆಗಳೊಂದಿಗೆ 13 ಆಸ್ಪತ್ರೆಗಳನ್ನು ಹೊಂದಿದ್ದೇವೆ’ ಎಂದರು.

ಆಸ್ಪತ್ರೆಯ ಭಾರತ ಘಟಕದ ಸಿಇಒ ಡಾ. ಹರೀಶ್ ಪಿಳ್ಳೈ ಮಾತನಾಡಿ, ‘ಬೆಂಗಳೂರು ಮತ್ತು ನೆರೆಯ ಜಿಲ್ಲೆಗಳ ನಿವಾಸಿಗಳಿಗೆ ಸುಲಭವಾಗಿ ಲಭ್ಯವಿರುವ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಆಸ್ಪತ್ರೆ ನೀಡಲಿದೆ. ಅತ್ಯಾಧುನಿಕ ರೋಗನಿರ್ಣಯ ಮತ್ತು ಚಿಕಿತ್ಸಕ ತಂತ್ರಜ್ಞಾನವನ್ನು ಬಳಸಿಕೊಂಡು ರೋಗಿಗಳಿಗೆ ಸಮಗ್ರ ಚಿಕಿತ್ಸೆಯನ್ನು ನೀಡಲು ಬದ್ಧರಾಗಿದ್ದೇವೆ’ಎಂದರು.

ಆಸ್ಪತ್ರೆಯ ರಾಜ್ಯಘಟಕದ ಸಿಇಒ ಡಾ. ನಿತೀಶ್ ಶೆಟ್ಟಿ, ಆರ್.ವಿ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಪಾಂಡುರಂಗ ಶೆಟ್ಟಿ ಮಾತನಾಡಿದರು.ಆಯ್ದ ಫಲಾನುಭವಿಗಳಿಗೆ ವಿಶೇಷ ಸವಲತ್ತು ಮತ್ತು ಸೇವೆ ಒದಗಿಸುವ ಆಸ್ಟರ್ ಆರೋಗ್ಯ ಕಾರ್ಡ್ಗಳನ್ನು ಶಾಸಕಿ ಸೌಮ್ಯಾ ರೆಡ್ಡಿ ವಿತರಿಸಿದರು.

ಆಸ್ಪತ್ರೆಯ ವಿಶೇಷತೆ

*ಹೃದಯ ವಿಜ್ಞಾನ, ನರ ವಿಜ್ಞಾನ, ಗ್ಯಾಸ್ಟ್ರೋ ವಿಜ್ಞಾನ, ಜನರಲ್ ಮತ್ತು ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ

* ಸಮಗ್ರ ಯಕೃತ್ತಿನ ಆರೈಕೆ, ಅಂಗಾಂಗ ಕಸಿ ವ್ಯವಸ್ಥೆ

*ಇಎನ್ಟಿ, ಜನರಲ್ ಮೆಡಿಸಿನ್, ಎಂಡೋಕ್ರೈನಾಲಜಿ, ಪ್ಲಾಸ್ಟಿಕ್ ಸರ್ಜರಿ, ಡರ್ಮಟಾಲಜಿ, ರೇಡಿಯಾಲಜಿ ಚಿಕಿತ್ಸೆ

*ಬೈ ಪ್ಲೇನ್ ಕ್ಯಾಥ್ ಲ್ಯಾಬ್, ರೋಬೋಟಿಕ್ ಶಸ್ತ್ರಚಿಕಿತ್ಸೆಗಳಿಗಾಗಿ ಡಾ. ವಿನ್ಸಿ ರೋಬೋಟಿಕ್ ಸಿಸ್ಟಂ

* ಇಂಟ್ರಾ-ಆಪರೇಟಿವ್ ಎಂಆರ್ಐ ಮೆಷಿನ್

* ಐಸಿಯು, ಸಿಸಿಯು ಮತ್ತು ಟಿಐಸಿಯುಗಳಲ್ಲಿ ತುರ್ತು ಸಂದರ್ಭಕ್ಕಾಗಿ 53 ಹಾಸಿಗೆಗಳ ಹೆಚ್ಚುವರಿ ವ್ಯವಸ್ಥೆ

* ವೈದ್ಯಕೀಯ ವಿಜ್ಞಾನದ ಎಲ್ಲ ಕ್ಷೇತ್ರಗಳ ತಜ್ಞ ವೈದ್ಯರು,ವೈದ್ಯಕೀಯ ವೃತ್ತಿಪರರು ಮತ್ತು ನರ್ಸ್ಗಳ ತಂಡ

ಅಂಕಿ–ಅಂಶ

1.5 ಲಕ್ಷ ಚದರ ಅಡಿಆಸ್ಪತ್ರೆಯ ವಿಸ್ತೀರ್ಣ

250ಹಾಸಿಗೆಗಳಮಲ್ಟಿ-ಸ್ಪೆಷಾಲಿಟಿ ಕ್ವಾಟರ್ನರಿ ಕೇರ್ ಆಸ್ಪತ್ರೆ

39ಹೊರರೋಗಿ ಸಮಾಲೋಚನಾ ಕೊಠಡಿಗಳು

9ಶಸ್ತ್ರಚಿಕಿತ್ಸೆ ಕೊಠಡಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.