ಬೆಂಗಳೂರು: ನಗರದಲ್ಲಿ ಬಿಡುವು ಕೊಡುತ್ತಲೇ ಮಳೆ ಮುಂದುವರಿದಿದ್ದು, ಶನಿವಾರ ರಾತ್ರಿಯೀಡಿ ವರುಣನ ಅಬ್ಬರ ಜೋರಾಗಿತ್ತು. ನಗರದ ಬಹುತೇಕ ಕಡೆ ಉತ್ತಮವಾದ ಮಳೆಯಾಯಿತು. ಗುಡುಗು–ಸಿಡಿಲಿನ ಜೊತೆಯಲ್ಲಿ ಗಾಳಿಯೂ ಜೋರಾಗಿ ಬೀಸಿತು.

ಶುಕ್ರವಾರವೂ ರಾತ್ರಿಯೀಡಿ ಸುರಿ
ದಿದ್ದ ಮಳೆಯಿಂದಾಗಿ ಪ್ರಮುಖ ರಸ್ತೆಗಳು ಹೊಳೆಯಂತಾಗಿದ್ದವು.

ಶನಿವಾರ ಬೆಳಿಗ್ಗೆ ಮಳೆ ಬಿಡುವು ನೀಡಿತ್ತು. ಸಂಜೆಯ
ವರೆಗೂ ಮಳೆಯಾಗುವ ಸೂಚನೆಯೇ ಇರಲಿಲ್ಲ. ಸಂಜೆ ನಂತರ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಜಿಟಿ ಜಿಟಿ ಮಳೆ ಶುರುವಾಯಿತು.

ರಾತ್ರಿಯಾಗುತ್ತಿದ್ದಂತೆ ಗುಡುಗು–ಸಿಡಿಲಿನ ಆರ್ಭಟದೊಂದಿಗೆ ಉತ್ತಮ ಮಳೆಯಾಯಿತು. ಪ್ರಮುಖ ರಸ್ತೆಗಳು, ಒಳ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು. ಕಾಲುವೆಗಳು ನೀರಿನಿಂದ ತುಂಬಿ ಹರಿದವು.

ಬನಶಂಕರಿ, ಬಸವನ
ಗುಡಿ, ಹನುಮಂತ
ನಗರ, ಗಿರಿನಗರ, ದೀಪಾಂಜಲಿನಗರ, ಚಾಮರಾಜಪೇಟೆ, ಕಾಟನ್‌ಪೇಟೆ, ಮೆಜೆಸ್ಟಿಕ್, ಗಾಂಧಿನಗರ, ಓಕಳಿ
ಪುರ, ರಾಜಾಜಿನಗರ, ವಿಜಯ
ನಗರ, ಮಲ್ಲೇಶ್ವರ, ಬಸವೇಶ್ವರನಗರ, ಮಹಾಲಕ್ಷ್ಮಿ ಬಡಾವಣೆ, ಯಶವಂತಪುರ, ಪೀಣ್ಯ, ಮಲ್ಲೇಶ್ವರ, ಹೆಬ್ಬಾಳ, ಆರ್.ಟಿ.ನಗರ, ಶಿವಾಜಿನಗರ, ಎಂ.ಜಿ.ರಸ್ತೆ, ಅಶೋಕನಗರ, ಕೋರಮಂಗಲ, ಮಡಿವಾಳ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಮಳೆ ಹೆಚ್ಚಿತ್ತು.

ಪ್ರಮುಖ ರಸ್ತೆಗಳಲ್ಲಿ ನೀರು ಹರಿದಿದ್ದರಿಂದ, ಅಲ್ಲೆಲ್ಲ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ವಾಹನಗಳು ನಿಧಾನಗತಿಯಲ್ಲಿ ಸಾಗಿದ್ದರಿಂದ ದಟ್ಟಣೆಯೂ ಕಂಡುಬಂತು.

‘ಬೆಳಿಗ್ಗೆ ಮಳೆ ಕಡಿಮೆ ಇದ್ದರೂ ರಾತ್ರಿ ಮಾತ್ರ ಜೋರಾಗುತ್ತಿದೆ. ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ’ ಎಂದೂ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.