ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆರೋಗ್ಯದ ಜಾಗೃತಿಗೆ ವಾಕಥಾನ್‌: ನಟಿ ಸಪ್ತಮಿ ಗೌಡ ಚಾಲನೆ

Last Updated 21 ನವೆಂಬರ್ 2022, 6:28 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ರೈನ್‌ಬೋ ಆಸ್ಪತ್ರೆಯು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಾಕಥಾನ್‌ಗೆ ಸಂಸದ ಪಿ.ಸಿ. ಮೋಹನ್, ನಟಿ ಸಪ್ತಮಿ ಗೌಡ ಮತ್ತು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಲಾ ಕೃಷ್ಣಮೂರ್ತಿ ಭಾನುವಾರ ಚಾಲನೆ ನೀಡಿದರು.

ನಟಿ ಸಪ್ತಮಿ ಗೌಡ ಮಾತನಾಡಿ, ‘ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಅತ್ಯಂತದ ಕಷ್ಟದ ದಿನಗಳನ್ನು ಎದುರಿಸಬೇಕಾಯಿತು. ಈಗ ಎಲ್ಲ ಕ್ಷೇತ್ರಗಳು ಚೇತರಿಸಿಕೊಂಡಿವೆ. ಮಕ್ಕಳ ಆರೋಗ್ಯ ಬಹಳ ಮುಖ್ಯ. ಈ ನಿಟ್ಟಿನಲ್ಲಿ ರೇನ್‌ಬೋ ಆಸ್ಪತ್ರೆ ಮಹತ್ತರ ಪಾತ್ರ ನಿರ್ವಹಿಸುತ್ತಿದೆ’ ಎಂದರು.

ಡಿಸಿಪಿ ಕಲಾ ಕೃಷ್ಣಮೂರ್ತಿ ಮಾತನಾಡಿ, ‘ಪ್ರತಿಯೊಬ್ಬರು ಸದೃಢವಾಗಿರುವುದು ಮುಖ್ಯ. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ವಾಕಥಾನ್‌ ಆಯೋಜಿಸಲಾಗಿದೆ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು’ ಎಂದರು.

ಕ್ಲಿನಿಕಲ್ ಡೈರೆಕ್ಟರ್ ಡಾ. ಅರವಿಂದ ಶೆಣೈ ಮಾತನಾಡಿ, ‘ಎಲ್ಲರ ಮಾನಸಿಕ ಆರೋಗ್ಯದ ಮೇಲೆ ಕೋವಿಡ್‌ ಪರಿಣಾಮ ಬೀರಿದೆ. ಮಕ್ಕಳನ್ನು ಅವರ ಹಿಂದಿನ ಜೀವನ ಶೈಲಿಗೆ ತರುವ ಸಮಯ ಇದಾಗಿದೆ. ಈ ವಾಕಥಾನ್ ಮೂಲಕ ಮಕ್ಕಳು ಮತ್ತು ವಯಸ್ಕರ ಜೀವನದಲ್ಲಿ ಬದಲಾವಣೆಯಾಗಬೇಕು. ಆರೋಗ್ಯಕರ ಜೀವನಕ್ಕೆ ಪ್ರತಿದಿನ ಹೆಜ್ಜೆ ಹಾಕಬೇಕು’ ಎಂದು ಸಲಹೆ ನೀಡಿದರು.

ರೈನ್ ಬೋ ಆಸ್ಪತ್ರೆಯ ಉಪಾಧ್ಯಕ್ಷ ಪಿ.ನಿತ್ಯಾನಂದ, ಮಕ್ಕಳ ತೀವ್ರ ನಿಗಾ ಸೇವೆಗಳ ಮುಖ್ಯಸ್ಥ ಡಾ. ರಕ್ಷಯ್ ಶೆಟ್ಟಿ, ಡಾ.ಎಂ.ಎಸ್. ಶ್ರೀಧರ್, ರತೀಫ್ ಕೆ.ಎಂ., ವಿಕ್ರಂ ವಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT