ರಾಜರಾಜೇಶ್ವರಿ ನಗರ: ‘ವಿಶ್ವದಲ್ಲಿಯೇ ಭಾರತೀಯ ಸಂಸ್ಕೃತಿ, ನಾಟಕ, ಕಲೆಗಳು ಸರ್ವಶ್ರೇಷ್ಠವಾಗಿದ್ದು, ಅವುಗಳ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು’ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ಮಲ್ಲತ್ತಹಳ್ಳಿಯ ರಾಷ್ಟ್ರೀಯ ನಾಟಕ ಶಾಲೆ ಆವರಣದಲ್ಲಿ ₹4.50ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಂಗ ಮಂದಿರದ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಶಾಸಕ ಮುನಿರತ್ನ ಮಾತನಾಡಿ, ‘ನಾಟಕ, ರಂಗಭೂಮಿ, ಸಾಹಿತ್ಯ ಮನುಷ್ಯನ ಮನೋವಿಕಾಸಕ್ಕೆ ದಾರಿದೀಪವಾಗಿವೆ. ನಮ್ಮ ಪೂರ್ವಿಕರ ಕಾಲದ ಸಂಸ್ಕೃತಿ ಉಳಿವಿಗಾಗಿ ನಾವೆಲ್ಲರೂ ದೃಢ ಸಂಕಲ್ಪ ಮಾಡಬೇಕಾಗಿದೆ. ಆಗ ಮಾತ್ರ ರಂಗಭೂಮಿ ಉಳಿಯುವ ಮೂಲಕ ಭಾರತೀಯ ಪರಂಪರೆ, ಇತಿಹಾಸ, ಸಂಸ್ಕೃತಿ ಮತ್ತು ನಾಟಕ ಮತ್ತಷ್ಟು ಶ್ರೀಮಂತಗೊಳ್ಳುತ್ತವೆ’ ಎಂದರು.

ರಾಜ್ಯಸಭೆ ಮಾಜಿ ಸದಸ್ಯೆ ಬಿ.ಜಯಶ್ರೀ, ಬಿಜೆಪಿ ಎಸ್ಸಿ ಮೋರ್ಚಾ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ. ಮಂಜುನಾಥ್, ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಚಿತ್ತರಂಜನ್ ತ್ರಿಪಾಠಿ, ಅರುಣಕುಮಾರ್, ವೀಣಾಶರ್ಮ, ಬಿಜೆಪಿ ವಾರ್ಡ್ ಸಮಿತಿ ಅಧ್ಯಕ್ಷ ಶಿವಶಂಕರ್, ಲಿಂಗರಾಜ್ ಗೌಡ, ಸ್ಥಳೀಯ ಮುಖಂಡ ಯೋಗೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.