ಬೆಂಗಳೂರು: ಕರ್ನಾಟಕ ರಿಯಲ್‌ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ರೇರಾ) ಮುಖ್ಯಸ್ಥರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ನೇಮಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಅಧ್ಯಕ್ಷರಾಗಿದ್ದ ಎಚ್.ಸಿ.ಕಿಶೋರ್ ಚಂದ್ರ ಅವರ ಅಧಿಕಾರ ಅವಧಿ ಮುಗಿದ ಕಾರಣ ಈ ಹುದ್ದೆ ತೆರವಾಗಿತ್ತು. ರಾಕೇಶ್ ಸಿಂಗ್ ಅವರ ಅಧಿಕಾರಾವಧಿ ಐದು ವರ್ಷ ಇರಲಿದೆ.
ರೇರಾಕ್ಕೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಅಧ್ಯಕ್ಷರು ಇಲ್ಲದ ಕಾರಣ ಪ್ರಾಧಿಕಾರದಲ್ಲಿ ನೂರಾರು ದೂರುಗಳು ವಿಲೇವಾರಿ ಆಗದೆ ಬಾಕಿ ಉಳಿದಿದ್ದವು. ಶೀಘ್ರವೇ ನೇಮಕ ಮಾಡ ಲಾಗುವುದೆಂದು ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿತ್ತು.