ಭಾನುವಾರ, ಮೇ 16, 2021
22 °C

50 ಅಡಿ ಎತ್ತರದ ರಾವಣನ ಪ್ರತಿಕೃತಿ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಇಸ್ಕಾನ್‌ ಸಂಸ್ಥೆಯು ವಿಶಿಷ್ಟವಾಗಿ ವಿಜಯದಶಮಿ ಆಚರಿಸಿತು. 

ರಾಮಾಯಣ ವೇಷಭೂಷಣ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು. ನೋಡುಗರ ಗಮನ ಸೆಳೆದರು. ರಾಮ, ಸೀತೆ, ಹನುಮಂತ ಸೇರಿದಂತೆ ವಿವಿಧ ವೇಷ ತೊಟ್ಟಿದ್ದ ಮಕ್ಕಳು ಕಾರ್ಯಕ್ರಮದ ಕಳೆ ಹೆಚ್ಚಿಸಿದರು.

ಇದೇ ಸಂದರ್ಭದಲ್ಲೇ ಭಜನೆ ಮತ್ತು ರಾಮತಾರಕ ಯಜ್ಞ ಕೂಡಾ ನಡೆಯಿತು. ನೆರೆದಿದ್ದ ಭಕ್ತರು ಸಾಮೂಹಿಕವಾಗಿ ಶ್ರೀರಾಮನ ನಾಮ ಸ್ಮರಣೆ ಮಾಡಿದರು.

ಅನಂತರ ಗಾಯಕ ವಿಜಯ್ ಪ್ರಕಾಶ್ ಹಾಗೂ ತಂಡದವರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು . 

50 ಅಡಿ ಎತ್ತರದ ರಾವಣ– ಕುಂಭಕರ್ಣ ಪ್ರತಿಕೃತಿಗಳನ್ನು ಸುಡುವ ಮೂಲಕ, ಆ ಎರಡು ವ್ಯಕ್ತಿತ್ವಗಳ ಕೆಟ್ಟ ಗುಣಗಳನ್ನು ತ್ಯಜಿಸೋಣ ಎಂಬ ಸಂದೇಶ ಸಾರಲಾಯಿತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು