ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಮೂಲಕ ಸಾಗಣೆಗೆ ಯತ್ನಿಸುತ್ತಿದ್ದ ₹ 2.40 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ

Last Updated 20 ಫೆಬ್ರುವರಿ 2022, 16:35 IST
ಅಕ್ಷರ ಗಾತ್ರ

ಬೆಂಗಳೂರು: ಹೊರದೇಶಕ್ಕೆ ವಿಮಾನದ ಮೂಲಕ ಕಳುಹಿಸುತ್ತಿದ್ದ ₹ 2.40 ಕೋಟಿ ಮೌಲ್ಯದ ರಕ್ತಚಂದನದ ತುಂಡುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ಅಂತರರಾಷ್ಟ್ರೀಯ ಸರಕು ಸಾಗಣೆ ವಿಭಾಗದಲ್ಲಿ (ಕಾರ್ಗೊ) ಪಾರ್ಸೆಲ್ ಮೂಲಕ ರಕ್ತಚಂದನ ಸಾಗಿಸುತ್ತಿದ್ದ ಮಾಹಿತಿ ಲಭ್ಯವಾಗಿತ್ತು. ವಿಭಾಗದಲ್ಲಿ ತಪಾಸಣೆ ನಡೆಸಿದಾಗ, ರಕ್ತಚಂದನ ತುಂಡುಗಳಿದ್ದ ಬಾಕ್ಸ್‌ಗಳು ಪತ್ತೆಯಾದವು’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೈವಾನ್‌ಗೆ ಬಾಕ್ಸ್‌ಗಳನ್ನು ಕಳುಹಿಸಲಾಗುತ್ತಿತ್ತು. ಈ ಜಾಲದ ರೂವಾರಿ ಸೇರಿ ಮೂವರನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಲಾಗುವುದು’ ಎಂದೂ ತಿಳಿಸಿವೆ.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಕ್ತಚಂದನಕ್ಕೆ ಬೇಡಿಕೆ ಇದೆ. ಪ್ಲೈವುಡ್‌ನಿಂದ ತಯಾರಿಸಿದ್ದ ಬಾಕ್ಸ್‌ಗಳಲ್ಲಿ ಪೀಠೋಪಕರಣಗಳನ್ನು ರಫ್ತು ಮಾಡುತ್ತಿರುವುದಾಗಿ ಆರೋಪಿಗಳು ಹೇಳಿಕೊಂಡಿದ್ದರು. ಇದೇ ರೀತಿ ಆರೋಪಿಗಳು, ಹಲವು ಬಾರಿ ರಕ್ತಚಂದನ ಸಾಗಿಸಿರುವ ಮಾಹಿತಿ ಇದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT