ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ನೋಂದಣಿ ಸಂಖ್ಯೆ ಹರಾಜು: ₹ 45.15 ಲಕ್ಷ ಸಂಗ್ರಹ

Published : 9 ನವೆಂಬರ್ 2023, 16:29 IST
Last Updated : 9 ನವೆಂಬರ್ 2023, 16:29 IST
ಫಾಲೋ ಮಾಡಿ
Comments

ಬೆಂಗಳೂರು: ವಾಹನಗಳ ಆಕರ್ಷಕ ನೋಂದಣಿ ಸಂಖ್ಯೆ ಪಡೆಯಲು ಜನರು ಅತಿ ಉತ್ಸಾಹ ತೋರಿದ್ದರಿಂದ ಬುಧವಾರ ನಡೆದ ಸಂಖ್ಯೆಗಳ ಹರಾಜಿನಲ್ಲಿ ₹ 45.15 ಲಕ್ಷ ರಾಜಸ್ವ ಸಂಗ್ರಹವಾಗಿದೆ.

ಸಾರಿಗೆ ಇಲಾಖೆ ವತಿಯಿಂದ ಬೆಂಗಳೂರಿನ ಯಶವಂತಪುರ ಪ್ರಾದೇಶಿಕ ಕಚೇರಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ಕೆಎ 05 ಎಂಕೆ 9999 ಸಂಖ್ಯೆಯು ಅತ್ಯಧಿಕ ಮೊತ್ತ ₹ 8 ಲಕ್ಷಕ್ಕೆ ಹರಾಜು ಆಯಿತು. ಕೆಎ 05 ಎಂಕೆ 0006 ಮತ್ತು ಕೆಎ 05 ಎಂಕೆ 0009 ಸಂಖ್ಯೆಗಳು ತಲಾ ₹ 4 ಲಕ್ಷಕ್ಕೆ ಹರಾಜಾದವು. 

ಕೆಎ 05 ಎಂಕೆ 1111 ಸಂಖ್ಯೆ ₹ 2.85 ಲಕ್ಷ, ಕೆಎ 05 ಎಂಕೆ 6666 ಸಂಖ್ಯೆ ₹ 2.80 ಲಕ್ಷ, ಕೆಎ 05 ಎಂಕೆ 0001 ₹ 1.75 ಲಕ್ಷಕ್ಕೆ ಹರಾಜಾದವು. ಇತರ 20 ಸಂಖ್ಯೆಗಳಲ್ಲಿ ತಲಾ ₹ 75 ಸಾವಿರದಂತೆ ರಾಜಸ್ವ ಸಂಗ್ರಹವಾಗಿದೆ ಎಂದು ಸಾರಿಗೆ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT