ಮಂಗಳವಾರ, ಜೂನ್ 15, 2021
23 °C

ರೆಮ್‌ಡಿಸಿವಿರ್ ಅಕ್ರಮ; ಅಪ್ನ ಕ್ಲಿನಿಕ್ ವೈದ್ಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೆಮ್‌ಡಿಸಿವಿರ್ ಚುಚ್ಚುಮದ್ದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ಡಾ. ಅಜಯ್‌ ಕುಮಾರ್ ಯಾದವ್ (25) ಎಂಬುವರನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಉತ್ತರ ಪ್ರದೇಶದ ಅಜಯ್‌ ಕುಮಾರ್, ನಗರದ ಬಾಗಲೂರು ಬಳಿ ವಾಸವಿದ್ದರು. ’ಅಪ್ನ ಕ್ಲಿನಿಕ್’ ಹೆಸರಿನಲ್ಲಿ ಆಸ್ಪತ್ರೆ ನಡೆಸುತ್ತಿದ್ದರು. ಅವರಿಂದ ಚುಚ್ಚುಮದ್ದಿನ 8 ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

’ಠಾಣೆ ವ್ಯಾಪ್ತಿಯ ಎಚ್‌ಬಿಆರ್ ಲೇಔಟ್‌ ಬಳಿ ರೆಮ್‌ಡಿಸಿವಿರ್ ಚುಚ್ಚುಮದ್ದು ಅಕ್ರಮ ಮಾರಾಟದ ಬಗ್ಗೆ ಮಾಹಿತಿ ಬಂದಿತ್ತು. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

‘ಆರೋಪಿಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು) ಇದೆ. ಅಲ್ಲಿ ದಾಖಲಾಗಿದ್ದ ರೋಗಿಗಳ ಹೆಸರಿನಲ್ಲಿ ಬೇರೆ ಆಸ್ಪತ್ರೆಗಳಿಂದ ಚುಚ್ಚುಮದ್ದು ಪಡೆಯುತ್ತಿದ್ದ ಆರೋಪಿ, ಅವುಗಳನ್ನೇ ₹ 11,000 ದರಕ್ಕೆ ಮಾರಾಟ ಮಾಡುತ್ತಿದ್ದರು. ಅವರು ಇದುವರೆಗೂ ಹಲವರಿಗೆ ಚುಚ್ಚುಮದ್ದು ಮಾರಿರುವ ಮಾಹಿತಿ ಇದೆ. ತನ್ನದೇ ಆಸ್ಪತ್ರೆಯ ರೋಗಿಗಳಿಗೂ ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತ ದುಬಾರಿ ಬೆಲೆಗೆ ಚುಚ್ಚುಮದ್ದು ನೀಡಿದ್ದರು’ ಎಂದೂ ಪೊಲೀಸರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು