ಬೆಂಗಳೂರು: ನಗರದ ವಿಶ್ವೇಶ್ವರಪುರ ಸಜ್ಜನ್ರಾವ್ ವೃತ್ತದ ನೈರುತ್ಯ ಭಾಗದಲ್ಲಿ ಸಜ್ಜನ್ರಾವ್ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವಿಶ್ವೇಶ್ವರಪುರ ಬಡಾವಣೆ ರಚನೆಯಾಗಿ 100 ವರ್ಷಗಳು ಕಳೆದಿವೆ. ನಗರದ ಅಭಿವೃದ್ಧಿಗೆ ಸಜ್ಜನ್ರಾವ್ ಅವರ ಶ್ರಮ ಹಾಗೂ ಕೊಡುಗೆ ಇದೆ. 20ನೇ ಶತಮಾನದಲ್ಲಿ ದೇವಸ್ಥಾನ, ಛತ್ರ, ಆರೋಗ್ಯ ಕೇಂದ್ರ ಹಾಗೂ ಜನೋಪಯೋಗಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ ಎಂದು ಪಿ.ಆರ್. ರಮೇಶ್ ನೆನಪಿಸಿದ್ದಾರೆ.

ಸಜ್ಜನ್ರಾವ್ ವೃತ್ತವನ್ನು ನಿರ್ಮಾಣ ಮಾಡಿ, ಪ್ರಥಮವಾಗಿ ಅದರ ಸುತ್ತ ಬೇಲಿ ಹಾಕಿಸಿ ಉದ್ಯಾನ ಮಾಡುವ ಕಾರ್ಯವನ್ನು ಈವರೆಗೆ ಮಾಡಲಾಗಿದೆ. ಈವರೆಗೆ ಅವರ ಮೂರ್ತಿ ಸ್ಥಾಪಿಸದಿರುವುದು ನಾಗರಿಕರಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ, ಸಜ್ಜನ್ರಾವ್ ಅವರ ಮೂರ್ತಿ ಸ್ಥಾಪಿಸಿ ಈ ಭಾಗದಲ್ಲಿ ಅವರ ಬಗ್ಗೆ ಜನರಿಗೆ ಅರಿವು ಹಾಗೂ ಮಾಹಿತಿಯನ್ನು ಒದಗಿಸಬೇಕು. ಈ ಬಗ್ಗೆ ಇಲಾಖೆ ಅಥವಾ ಬಿಬಿಎಂಪಿಗೆ ಈ ಬಗ್ಗೆ ಆದೇಶ ನೀಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.