ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಗುರುತಿನ ಚೀಟಿ ಪಡೆಯಲು ರೆಡ್‌ಕ್ರಾಸ್‌ ಸಂಸ್ಥೆ ಸದಸ್ಯರಿಗೆ ಕೋರಿಕೆ

Published 4 ಜೂನ್ 2024, 0:08 IST
Last Updated 4 ಜೂನ್ 2024, 0:08 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಸದಸ್ಯರು, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹೊಸ ಗುರುತಿನ ಚೀಟಿ ಪಡೆಯವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೋರಿದ್ದಾರೆ.

ನೋಂದಾಯಿತರಾದ ಸದಸ್ಯರು, ಗುರುತಿನ ಚೀಟಿ ಪಡೆಯದೇ ಇದ್ದಲ್ಲಿ ಅಂತಹ ಸದಸ್ಯರಿಗೆ ಸರ್ವಸದಸ್ಯರ ಸಭೆ ಹಾಗೂ ಚುನಾವಣೆಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ರೆಡ್‌ಕ್ರಾಸ್‌ನ ಕರ್ನಾಟಕ ರಾಜ್ಯ ಶಾಖೆಯಲ್ಲಿ ಒಟ್ಟು 6 ಸಾವಿರ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಬೆಂಗಳೂರು ನಗರ ಶಾಖೆ, ರಾಜ್ಯ ಶಾಖೆಯಿಂದ ವರ್ಗಾವಣೆಯಾದವರು ಅಗತ್ಯ ದಾಖಲೆಗಳು ಹಾಗೂ ಇತ್ತೀಚಿನ ಭಾವಚಿತ್ರ, ಆಧಾರ್‌ ಕಾರ್ಡ್‌ ಅನ್ನು ಕಾರ್ಯದರ್ಶಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, 1ನೇ ಮಹಡಿ, ಕಂದಾಯ ಭವನ, ಕೆಜಿ ರಸ್ತೆ, ಬೆಂಗ‌ಳೂರು – ಇಲ್ಲಿಗೆ ಸಲ್ಲಿಸಿ ಹೊಸ ಗುರುತಿನ ಚೀಟಿ ಪಡೆಯಬಹುದು ಎಂದು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT