ರಾಜರಾಜೇಶ್ವರಿ ನಗರ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗಿಕರಣದಲ್ಲಿ ಭೋವಿ, ಬಂಜಾರ, ಕೊರಮ, ಕೊರಚ, ಅಲೆಮಾರಿ ಸಮುದಾಯಗಳಿಗೆ ಆಗಿರುವ ಅನ್ಯಾಯದ ವಿರುದ್ಧ ರಾಜ್ಯ ಸರ್ಕಾರದ ವಿರುದ್ಧ ಮಾರ್ಚ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಚಿತ್ರದುರ್ಗ ಭೋವಿ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.

ಅಂದ್ರಹಳ್ಳಿಯ ಚಕ್ರ ನಗರದಲ್ಲಿ ಜರುಗಿದ ಸಿದ್ದರಾಮೇಶ್ವರ ಜಯಂತ್ಯುತ್ಸವ ಮತ್ತು ಸಿದ್ದರಾಮೇಶ್ವರ ಭೋವಿ (ವಡ್ಡರ) ಬಳಗ– ಬೆಂಗಳೂರು ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಪ್ರವರ್ಗ ‘ಸಿ’ ಎಂಬ ಸೂತ್ರದ ಮೂಲಕ ಒಳ ಮೀಸಲಾತಿಯೊಳಗೆ ಒಳ ಮೀಸಲಾತಿ ತರುತ್ತಿರುವುದು ಪರಿಶಿಷ್ಟ ಜಾತಿಗೆ ಮಾಡುತ್ತಿರುವ ಅನ್ಯಾಯ. ಪ್ರವರ್ಗ ‘ಸಿ’ ಸೂತ್ರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.

ಭೋವಿ ಜನಾಂಗ ಶ್ರಮಜೀವಿಗಳು, ಬೆವರು ಸುರಿಸಿ ದುಡಿದು ತಿನ್ನುವ ಜನಾಂಗ, ಅಲೆಮಾರಿಗಳಾಗಿದ್ದು ಕೂಲಿ ಸಿಗುವ ಕಡೆ ವಲಸೆ ಹೋಗುವ ಜನಾಂಗಕ್ಕೆ ರಾಜ್ಯ ಸರ್ಕಾರ ಮೀಸಲಾತಿಯಲ್ಲಿ ಅನ್ಯಾಯ ಮಾಡಿದೆ. ಬಜೆಟ್ ಅಧಿವೇಶನ ಸಮಯದಲ್ಲಿ ಹೋರಾಟ ನಡೆಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಿ ಗೌಡ ಮಾತನಾಡಿ, ‘ಭೋವಿ ಜನಾಂಗ ಅವಿದ್ಯಾವಂತ, ಮುಗ್ಧ, ಪ್ರಾಮಾಣಿಕ ಜನಾಂಗವಾಗಿದ್ದು ರಾಷ್ಟ್ರ ನಿರ್ಮಾಣದಲ್ಲಿ, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ’ ಎಂದರು.

ರಾಷ್ಟ್ರೀಯ ಭೋವಿ (ವಡ್ಡರ) ಜನಾಂಗದ ಅಧ್ಯಕ್ಷ ರವಿ ಎಚ್. ಮಾಕಳಿ, ಎಂ.ಆರ್.ಟಿ ಸಂಸ್ಥೆಯ ಮಾಲೀಕ ಅಂದ್ರಹಳ್ಳಿ ಪ್ರಕಾಶ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ಜಯಶಂಕರ್, ಬೆಂಗಳೂರು ನಗರ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಎ.ವೆಂಕಟೇಶ್, ಸಂಘದ ಅಧ್ಯಕ್ಷ ಭೀಮರಾಜು, ಜೆಡಿಎಸ್ ಮುಖಂಡ ಗೋಪಾಲ್, ಸಂಘದ ಪದಾಧಿಕಾರಿಗಳಾದ ಸಾಬಣ್ಣ, ಭೀಮರಾಯ್, ದೀಪಕ್, ತಿರುಪತಿ, ಲಕ್ಷ್ಮಣ್ ವಡ್ಡಾರ್, ಹುಸೇನಪ್ಪ, ಮಲ್ಲಪ್ಪ, ಭರತ್, ಎನ್. ಸಾಬಣ್ಣ, ತಿಮ್ಮಯ್ಯ, ನರಸಿಂಹ, ಭೀಮಣ್ಣ, ಶರಣಪ್ಪ, ಹನುಮಂತ, ಮಾದೇಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.