ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್ತಿನ ಯೋಜನೆಯಾದ ‘ಸಾಧನಾ’ದಲ್ಲಿ ಕಲಿತ ಮಂಡ್ಯದ ರಿತ್ವಿಜಾ ದೇವೇಗೌಡ ಅವರು ಪುಣೆಯ ಸೇನಾ ವೈದ್ಯಕೀಯ ಕಾಲೇಜಿಗೆ (ಎಎಫ್ಎಂಸಿ) ಪ್ರವೇಶ ಪಡೆದಿದ್ದಾರೆ.

ಸೇನಾ ವೈದ್ಯಕೀಯ ಕಾಲೇಜಿಗೆ ದೇಶದ ವಿವಿಧ ರಾಜ್ಯಗಳಿಂದ ಪ್ರತಿ ವರ್ಷ 30 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗುತ್ತದೆ. ಕರ್ನಾಟಕದಿಂದ ಆಯ್ಕೆಯಾದವರು ಅವರೊಬ್ಬರೇ.

ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿರುವ ಗ್ರಾಮೀಣ ಪ್ರದೇಶದ ಆರ್ಥಿಕ ದುರ್ಬಲ ವರ್ಗದ ವಿದ್ಯಾರ್ಥಿನಿಯರಿಗೆ ರಾಷ್ಟ್ರೋತ್ಥಾನ ಪರಿಷತ್ ಎರಡು ವರ್ಷ ಪದವಿಪೂರ್ವ ಶಿಕ್ಷಣ ನೀಡಿ, ನಂತರ ವೈದ್ಯಕೀಯ ಪ್ರವೇಶ ಪರೀಕ್ಷೆಗಳ ತರಬೇತಿ ಕೊಡಿಸುತ್ತದೆ. ಈ ಅವಧಿಯಲ್ಲಿ ಊಟ, ವಸತಿ, ಶುಲ್ಕ ಸೇರಿದಂತೆ ಎಲ್ಲ ವೆಚ್ಚವನ್ನೂ ಪರಿಷತ್ ಭರಿಸುತ್ತದೆ. 2017ರಲ್ಲಿ ಆರಂಭವಾದ ಈ ಯೋಜನೆಯ ಪ್ರಯೋಜನವನ್ನು 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಡೆದಿದ್ದಾರೆ. 54 ಮಂದಿ ವೈದ್ಯಕೀಯ ಪ್ರವೇಶ ಪಡೆದಿದ್ದಾರೆ.

ಮಂಡ್ಯದ ರೈತ ಕುಟುಂಬದ ರಿತ್ವಿಜಾ ಅವರು ಸಾಧನಾದ 5ನೇ ಬ್ಯಾಚ್ನ (2021-23) ವಿದ್ಯಾರ್ಥಿನಿ. ನೀಟ್ ಪರೀಕ್ಷೆಯಲ್ಲಿ ಅವರು 670 ಅಂಕಗಳು ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.