ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಬಸ್ ಪೇಟೆ: ಧಾರಾಕಾರ ಮಳೆ- ರಸ್ತೆ ಸಂಪರ್ಕವೇ ಕಡಿತ

Last Updated 20 ಅಕ್ಟೋಬರ್ 2022, 21:11 IST
ಅಕ್ಷರ ಗಾತ್ರ

ದಾಬಸ್ ಪೇಟೆ: ಧಾರಾಕಾರ ಮಳೆಯಿಂದಾಗಿ ನೆಲಮಂಗಲ ತಾಲ್ಲೂಕಿನ, ಸೋಂಪುರ ಹೋಬಳಿಯ ಗಡಿ ಗ್ರಾಮ ಬರಗೂರು ಕಾಲೊನಿ ಸಂಪರ್ಕ ಕಡಿತಗೊಂಡಿದೆ. ಸರ್ಕಾರ ಇಲ್ಲಿ ಸುಮಾರು 60 ವರ್ಷಗಳ ಹಿಂದೆ ಕಾಲೊನಿ ನಿರ್ಮಿಸಿ ಬಡವರಿಗೆ ನಿವೇಶನ ನೀಡಿತ್ತು. ಅಲ್ಲಿ ನಿರಾಶ್ರಿತರು ಜೀವನ ನಡೆಸುತ್ತಿದ್ದಾರೆ.

ಕಾಲೊನಿ ಜತೆಗೆ ಸುತ್ತ ಮುತ್ತ ಮುತ್ತರಾಯಪ್ಪನ ಪಾಳ್ಯ, ಗೋವಿಂದನ ಪಾಳ್ಯ ಮತ್ತು ಚಲ್ಲಳ ಸಹ ಇವೆ. ನಾಲ್ಕು ಕಾಲೊನಿಗಳಿಂದ 70ಕ್ಕೂ ಹೆಚ್ಚು ಕುಟುಂಬಗಳಿವೆ.ಈ ಕುಟುಂಬಗಳು ಬರಗೂರು ಗ್ರಾಮದೊಂದಿಗೆ ನಿಕಟ ಸಂಪರ್ಕ ಹೊಂದಿವೆ.

ಶಾಲೆ, ದಿನಸಿ ಪದಾರ್ಥ ಖರೀದಿ, ಹಾಲಿನ ಡೇರಿ, ಪಶು ಆಸ್ಪತ್ರೆ ಹೀಗೆ ದಿನ ನಿತ್ಯದ ಕಾರ್ಯಗಳಿಗೆ ಬರಗೂರು ಗ್ರಾಮಕ್ಕೆ ಬರಬೇಕು. ಮಳೆಯಿಂದ ಇವರೆಲ್ಲಾಕೆಲ ದಿನಗಳಿಂದ ಐದಾರು ಅಡಿ ನೀರಿನಲ್ಲಿ ಭಯದಲ್ಲಿ ಬರಗೂರು ಗ್ರಾಮಕ್ಕೆ ಬರುತ್ತಿದ್ದಾರೆ. ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇಲ್ಲದಂತಾಗಿದೆ.

ಕಾಲೊನಿಯಲ್ಲಿ 40ಕ್ಕೂ ಹೆಚ್ಚು ಹಾಲು ಉತ್ಪಾದಕರಿದ್ದು, ನಿತ್ಯ ಎರಡು ಬಾರಿ ಡೇರಿಗೆ ಹಾಲು ಹಾಕಬೇಕು. ಜೀವದ ಹಂಗು ತೊರೆದು ಹಾಲಿನ ಕ್ಯಾನ್ ಜೊತೆ ಕಾಲುವೆ ದಾಟಿ ಡೇರಿಗೆ ಹಾಲು ಹಾಕಿ ಬರುತ್ತಿದ್ದಾರೆ. ‘ಹತ್ತಾರು ಲೀಟರ್ ಹಾಲು ಇಟ್ಟುಕೊಂಡು ಏನು ಮಾಡುವುದು? ಹಳ್ಳದಲ್ಲಿಯೇ ದಾಟುವುದು ಅನಿವಾರ್ಯ’ ಎನ್ನುತ್ತಾರೆ ಹಾಲು ಉತ್ಪಾದಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT