ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ನೆಪದಲ್ಲಿ ಹಣ ಸುಲಿಗೆ: ಪೊಲೀಸರಿಂದ ಆರೋಪಿಗಳ ಬಂಧನ

Last Updated 11 ನವೆಂಬರ್ 2022, 19:33 IST
ಅಕ್ಷರ ಗಾತ್ರ

ಬೆಂಗಳೂರು: ಒಂಟಿಯಾಗಿ ಕಾರಿನಲ್ಲಿ ತೆರಳುತ್ತಿದ್ದ ಚಾಲಕರನ್ನು ಅಡ್ಡಗಟ್ಟಿ ಅಪಘಾತದ ನೆಪವೊಡ್ಡಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

‘ಮೈಸೂರಿನ ರಾಜೇಂದ್ರ ನಗರದ 9ನೇ ಕ್ರಾಸ್‌ನ ನಿವಾಸಿ ಜಮೀಲ್‌ ಖಾನ್‌ (30) ಹಾಗೂ ಬಿಹಾರದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಂಧಿತರಿಂದ ₹ 15 ಸಾವಿರ ನಗದು, ಕೃತ್ಯ ಎಸಗಲು ಬಳಸಿದ್ದ ಬೈಕ್‌ ಅನ್ನು ಜಪ್ತಿ ಮಾಡಲಾಗಿದೆ.

‘ಲಾಲ್‌ಬಾಗ್‌ ರಸ್ತೆ ಹಾಗೂ ಹೊಸೂರು ಮುಖ್ಯರಸ್ತೆಗಳಲ್ಲಿ ಒಂಟಿ ಯಾಗಿ ಕಾರು ಚಲಾಯಿಸುತ್ತಿದ್ದವರನ್ನೇ ಇಬ್ಬರು ಆರೋಪಿಗಳು ಗುರಿಯಾಗಿಸಿ ಹಣ ಸುಲಿಗೆ ಮಾಡುತ್ತಿದ್ದರು. ಹಿಂದಿನಿಂದ ಬೈಕ್‌ನಲ್ಲಿ ಬರುತ್ತಿದ್ದ ಆರೋಪಿಗಳು, ತಾವೇ ಮೊದಲು ಕಾರಿಗೆ ಡಿಕ್ಕಿ ಹೊಡೆಸುತ್ತಿದ್ದರು. ಬಳಿಕ, ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಸುಳ್ಳು ಹೇಳಿ ಬೆದರಿಕೆ ಹಾಕುತ್ತಿದ್ದರು. ಹಣ ನೀಡದಿದ್ದರೆ ಪೊಲೀಸರಿಗೆ ದೂರು ನೀಡುವ ನಾಟಕವಾಡುತ್ತಿದ್ದರು. ಇದರಿಂದ ಕಾರು ಚಾಲಕರು ಹೆದರಿ ಕೇಳಿದಷ್ಟು ಹಣ ನೀಡುತ್ತಿದ್ದರು’ ಎಂದು ಮೂಲಗಳು ಹೇಳಿವೆ.

ಪಿಸ್ತೂಲ್‌ ಸಾಗಣೆ: ಆರೋಪಿ ಬಂಧನ
ಬೆಂಗಳೂರು:
ಪಿಸ್ತೂಲ್‌ ಹಾಗೂ ಎರಡು ಗುಂಡು ಸಾಗಣೆ ಮಾಡುತ್ತಿದ್ದ ಆರೋಪಿ ಯನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿ ದ್ದಾರೆ.ಗೋವಿಂದಪುರದ ನಿವಾಸಿ ಸೈಯದ್‌ ಜಬೀವುಲ್ಲಾ (37) ಬಂಧಿತ ಆರೋಪಿ.

‘ಶ್ಯಾಂಪುರ ಮುಖ್ಯರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಬಳಿ ಆರೋಪಿ ಬಂಧಿಸಲಾಗಿದೆ. ಜಬೀವುಲ್ಲಾ ಬಳಿ ಶಸ್ತ್ರಾಸ್ತ್ರ ಪರವಾನಗಿ ಇರಲಿಲ್ಲ. ನುಸ್ರತ್‌ ಎಂಬಾತನ ಕೊಲೆ ಆರೋಪದಡಿ ಈತ ಜೈಲಿಗೆ ಹೋಗಿದ್ದ. 2018ರಲ್ಲಿ ಬಿಡುಗಡೆಯಾಗಿದ್ದ’ ಎಂದು ಹೇಳಿವೆ.

‘ನಸ್ರುತ್‌ನ ಬೆಂಬಲಿಗರಿಂದ ಬೆದರಿಕೆಯಿದ್ದು,ಆತ್ಮರಕ್ಷಣೆಗಾಗಿ ಮುಂಬೈನ ವ್ಯಕ್ತಿಯಿಂದ ₹ 20 ಸಾವಿರಕ್ಕೆ ಪಿಸ್ತೂಲ್‌ ಖರೀದಿಸಿರುವುದಾಗಿ ಆರೋಪಿ ವಿಚಾರಣೆಯಲ್ಲಿ ತಿಳಿಸಿದ್ದಾನೆ.ಪಿಸ್ತೂಲ್ ಮಾರಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT