ಬೆಂಗಳೂರು: ‘ಮಕ್ಕಳಲ್ಲಿ ಸೃಜನಶೀಲತೆ ಅರಳಲು ಆಟಗಳು ಸಹಕಾರಿ. ಅವರಿಗೆ ತೋಚಿದ ಹಾಗೂ ಅವರ ಶೈಲಿಯಲ್ಲಿ ಆಡಲು ಪಾಲಕರು ಬಿಡಬೇಕು’ ಎಂದು ಲೇಖಕಿ ರೋಹಿಣಿ ನಿಲೇಕಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಏಕ್ಸ್ಟೆಫ್ ಫೌಂಡೇಷನ್ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರ ‘ಪ್ಲೇಬುಕ್ ಆಫ್ ಪ್ಲೇ’ ಕೃತಿ ಜನಾರ್ಪಣೆಯಾಯಿತು. ಈ ವೇಳೆ ಮಾತನಾಡಿದ ಅವರು, ‘ಬಾಲ್ಯದಲ್ಲಿ ಮಕ್ಕಳು ನಿಯಮಬದ್ಧವಾದ ಆಟಗಳನ್ನು ಆಡುವುದಕ್ಕಿಂತ, ಅವರಿಗೆ ತೋಚಿದ ಆಟಗಳನ್ನು ಆಡಲು ಪ್ರೋತ್ಸಾಹಿಸಬೇಕು. ಆಗ ಅವರ ಕಲ್ಪನೆ, ಸೃಜನಶೀಲತೆ ಹೊರಹೊಮ್ಮಲಿದೆ’ ಎಂದು ಹೇಳಿದರು.

‘ಆಟವು ಮಗುವಿನ ಭಾಷೆಯಾಗಿದೆ. ನರವಿಜ್ಞಾನದ ಸಂಶೋಧನೆ ಪ್ರಕಾರ, ಆಟವು ಮಿದುಳಿನ ರಚನೆ ಮತ್ತು ಕಾರ್ಯವನ್ನು ಬಲಪಡಿಸುತ್ತದೆ. ಸ್ವಯಂ ನಿಯಂತ್ರಣ, ಕೌಶಲವೃದ್ಧಿ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ’ ಎಂದರು.

‘ಮಕ್ಕಳಿಗೆ ಆಟಗಳ ಬಗ್ಗೆ ಸೂಚನಾ ಕೈಪಿಡಿಗಳು ಅಗತ್ಯವಿಲ್ಲ. ಬದಲಾಗಿ, ಅವರಿಗೆ ಸ್ವಾತಂತ್ರ್ಯ, ವಿಶ್ವಾಸ ಮತ್ತು ಸ್ಥಳ ಬೇಕಿದೆ. ಆಟಗಳು ಸ್ವಾಭಾವಿಕವಾಗಿ ಬರುತ್ತವೆ’ ಎಂದು ಹೇಳಿದರು.

ಏಕ್ಸ್ಟೆಪ್ ಫೌಂಡೇಷನ್ನ ನೀತಿ ಮತ್ತು ಪಾಲುದಾರಿಕೆಗಳ ಮುಖ್ಯಸ್ಥೆ ದೀಪಿಕಾ ಮೊಗಿಲಿಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.