ರೋಹಿತ್ ಅವರು ಬರೆದ ಕೊನೆಯ ಪತ್ರವನ್ನು ಲಕ್ಷ್ಮಣ್ ಅವರು ಓದುವಾಗ ರಾಧಿಕಾ ವೇಮುಲ ಅವರು ವೇದಿಕೆ ಮೇಲೆ ಕುಳಿತುಕೊಂಡೇ ಕಣ್ಣೀರು ಸುರಿಸಿದರು. ಬಳಿಕ ಮಾತನಾಡುವಾಗಲೂ ಮಗನಿಗೆ ಎದುರಾದ ಸವಾಲು ಸಮಸ್ಯೆ ನೆನೆದು ಗದ್ಗದಿತರಾದರು. ‘ಮಗನನ್ನು ಡಾ. ರೋಹಿತ್ ವೇಮುಲ ಚಕ್ರವರ್ತಿ ಎಂದೇ ಎಲ್ಲರೂ ಕರೆಯಬೇಕು ಎಂಬುದು ನನ್ನ ಕನಸಾಗಿತ್ತು’ ಎಂದು ನೆನಪು ಮಾಡಿಕೊಂಡು ದುಃಖಿತರಾದರು.