ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟರಿಯಿಂದ ‘ಗುರುದಕ್ಷಿಣೆ ಪ್ರಶಸ್ತಿ’ಗೆ ಅರ್ಜಿ ಆಹ್ವಾನ

Last Updated 25 ಮಾರ್ಚ್ 2021, 19:57 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯುತ್ತಮ ಶಿಕ್ಷಕರಿಗೆ ‘ಗುರುದಕ್ಷಿಣೆ ಪ್ರಶಸ್ತಿ’ ನೀಡಲು ಮುಂದಾಗಿರುವ ರೋಟರಿ ಸಂಸ್ಥೆಯು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಶಿಕ್ಷಕರಿಗೆ ಅಗತ್ಯ ಇರುವ ಸಮಯದಲ್ಲಿ ನೆರವು ನೀಡಲು ನಿಧಿ ಸ್ಥಾಪಿಸುವ ಉದ್ದೇಶವನ್ನೂ ಸಂಸ್ಥೆ ಹೊಂದಿದೆ.

ರೋಟರಿ ಸಂಸ್ಥೆಯ ಬೆಂಗಳೂರು ಆಗ್ನೇಯ, ಸ್ಪಂದನ, ಲೇಕ್‌ಸೈಡ್‌ ಹಾಗೂ ರೋಟರಿ ಬೆಂಗಳೂರು ಮಾನ್ಯತಾ ಕ್ಲಬ್‌ಗಳು ಸೇರಿ ಈ ಪ್ರಶಸ್ತಿಯನ್ನು ನೀಡುತ್ತಿವೆ.

ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು, ಕ್ರೀಡೆ, ಕಲೆ ಮತ್ತು ಸಂಗೀತ, ಸಾಂಪ್ರದಾಯಿಕ ಜ್ಞಾನ ಹಾಗೂ ವಿಶೇಷ ಮಕ್ಕಳು ಎಂಬ ಎಂಟು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

ಅರ್ಜಿ ಸಲ್ಲಿಸುವವರು ಅಥವಾ ನಾಮನಿರ್ದೇಶಿತರು ತಮ್ಮ ಹೆಸರು, ವಿಳಾಸ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ, ಸಂಪರ್ಕ ಸಂಖ್ಯೆ, ಇ–ಮೇಲ್‌ ವಿಳಾಸ, ಹಿಂದಿನ ಮೂರು ವರ್ಷಗಳಲ್ಲಿ ನೀಡಿರುವ ಕೊಡುಗೆ ಹಾಗೂ ಅದರ ಪರಿಣಾಮ, ಸೇವಾ ಅನುಭವ, ಶೈಕ್ಷಣಿಕ ಅರ್ಹತೆ, ಹಿಂದೆ ಕೆಲಸ ಮಾಡಿದ ಸಂಸ್ಥೆಗಳು, ಇತರ ಕ್ಷೇತ್ರಗಳಲ್ಲಿನ ಕೊಡುಗೆ ಮತ್ತು ಯಾವುದಾದರೂ ಪ್ರಶಸ್ತಿಗಳನ್ನು ಪಡೆದಿದ್ದರೆ ಆ ಕುರಿತ ಮಾಹಿತಿಯನ್ನು ಪಿಡಿಎಫ್‌ ರೂಪದಲ್ಲಿ ಒದಗಿಸಬೇಕು.

ಇತ್ತೀಚೆಗೆ ತಮ್ಮ ವಿದ್ಯಾರ್ಥಿಗಳಿಗೆ ಮಾಡಿದ ಬೋಧನೆ, ಕಲಿಕೆ ಅಥವಾ ಮೌಲ್ಯಮಾಪನದಲ್ಲಿ ಪ್ರಯತ್ನಿಸಿದ ಮೂರು ನವೀನ ವಿಚಾರಗಳು ಅಥವಾ ಪ್ರಯೋಗಗಳ ಕುರಿತು ಸುಮಾರು 300 ಪದಗಳಲ್ಲಿ ವಿವರಿಸ
ಬೇಕು. ಇದನ್ನು ಕನಿಷ್ಠ ಎರಡು ಮಾದರಿಗಳೊಂದಿಗೆ ತರಗತಿಯಲ್ಲಿ ಅನುಷ್ಠಾನಗೊಳಿಸಿರಬೇಕು. ಇದರ ಜೊತೆಗೆ ಎರಡು ಛಾಯಾಚಿತ್ರಗಳು, ಎರಡು ನಿಮಿಷದ ವಿಡಿಯೊ ತುಣುಕು, ವಿದ್ಯಾರ್ಥಿಗಳ ಪ್ರತಿಕ್ರಿಯೆ, ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಸಹ ಶಿಕ್ಷಕರ ಪ್ರತಿಕ್ರಿಯೆ ಮತ್ತು ಸ್ವಯಂ ಅವಲೋಕನದ ವಿವರಗಳನ್ನು ಲಗತ್ತಿಸಿರಬೇಕು. ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಕೆ ಅಥವಾ ನಾಮನಿರ್ದೇಶನಕ್ಕೆ ಮಾರ್ಚ್‌ 31 ಕೊನೆಯ ದಿನ. ಏ. 25ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಮಾಹಿತಿಗೆ, 9449750492.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT