ಮಂಗಳವಾರ, ಮೇ 24, 2022
27 °C
ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ನೀಡಲಾಗುವ ಪುರಸ್ಕಾರ: ಅರ್ಜಿ ಸಲ್ಲಿಕೆಗೆ ಮಾರ್ಚ್‌ 5 ಕೊನೆಯ ದಿನ

ಅತ್ಯುತ್ತಮ ಶಿಕ್ಷಕರಿಗೆ ‘ಗುರುದಕ್ಷಿಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3190ರ ರೋಟರಿ ಬೆಂಗಳೂರು ಆಗ್ನೇಯ, ರೋಟರಿ ಬೆಂಗಳೂರು ಸ್ಪಂದನ, ರೋಟರಿ ಬೆಂಗಳೂರು ಲೇಕ್‌ಸೈಡ್‌ ಹಾಗೂ ರೋಟರಿ ಬೆಂಗಳೂರು ಮಾನ್ಯತಾ ಕ್ಲಬ್‌ಗಳ ಸಹಯೋಗದಲ್ಲಿ ‘ಗುರುದಕ್ಷಿಣೆ ಪ್ರಶಸ್ತಿ’ ನೀಡಲು ನಿರ್ಧರಿಸಲಾಗಿದೆ.

ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು, ಕ್ರೀಡೆ, ಕಲೆ ಮತ್ತು ಸಂಗೀತ, ಸಾಂಪ್ರದಾಯಿಕ ಜ್ಞಾನ ಹಾಗೂ ವಿಶೇಷ ಮಕ್ಕಳು ಎಂಬ ಎಂಟು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

ಅರ್ಜಿ ಸಲ್ಲಿಸುವವರು ಅಥವಾ ನಾಮನಿರ್ದೇಶಿತರು ತಮ್ಮ ಹೆಸರು, ವಿಳಾಸ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ, ಸಂಪರ್ಕ ಸಂಖ್ಯೆ, ಇ–ಮೇಲ್‌ ವಿಳಾಸ, ಹಿಂದಿನ ಮೂರು ವರ್ಷಗಳಲ್ಲಿ ನೀಡಿರುವ ಕೊಡುಗೆ ಹಾಗೂ ಅದರ ಪರಿಣಾಮ, ಸೇವಾ ಅನುಭವ, ಶೈಕ್ಷಣಿಕ ಅರ್ಹತೆ, ಹಿಂದೆ ಕೆಲಸ ಮಾಡಿದ ಸಂಸ್ಥೆಗಳು, ಇತರ ಕ್ಷೇತ್ರಗಳಲ್ಲಿನ ಕೊಡುಗೆ ಮತ್ತು ಯಾವುದಾದರೂ ಪ್ರಶಸ್ತಿಗಳನ್ನು ಪಡೆದಿದ್ದರೆ ಆ ಕುರಿತ ಮಾಹಿತಿಯನ್ನು ಪಿಡಿಎಫ್‌ ರೂಪದಲ್ಲಿ ಒದಗಿಸಬೇಕು.

ಇತ್ತೀಚೆಗೆ ತಮ್ಮ ವಿದ್ಯಾರ್ಥಿಗಳಿಗೆ ಮಾಡಿದ ಬೋಧನೆ, ಕಲಿಕೆ ಅಥವಾ ಮೌಲ್ಯಮಾಪನದಲ್ಲಿ ಪ್ರಯತ್ನಿಸಿದ ಮೂರು ನವೀನ ವಿಚಾರಗಳು ಅಥವಾ ಪ್ರಯೋಗಗಳ ಕುರಿತು ಸುಮಾರು 300 ಪದಗಳಲ್ಲಿ ವಿವರಿಸಬೇಕು. ಇದನ್ನು ಕನಿಷ್ಠ ಎರಡು ಮಾದರಿಗಳೊಂದಿಗೆ ತರಗತಿಯಲ್ಲಿ ಅನುಷ್ಠಾನಗೊಳಿಸಿರಬೇಕು. ಇದರ ಜೊತೆಗೆ ಎರಡು ಛಾಯಾಚಿತ್ರಗಳು, ಎರಡು ನಿಮಿಷದ ವಿಡಿಯೊ ತುಣುಕು, ವಿದ್ಯಾರ್ಥಿಗಳ ಪ್ರತಿಕ್ರಿಯೆ, ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಸಹ ಶಿಕ್ಷಕರ ಪ್ರತಿಕ್ರಿಯೆ ಮತ್ತು ಸ್ವಯಂ ಅವಲೋಕನದ ವಿವರಗಳನ್ನು ಲಗತ್ತಿಸಿರಬೇಕು.

ಅರ್ಜಿ ಸಲ್ಲಿಸಲು ಅಥವಾ ನಾಮನಿರ್ದೇಶನ ಮಾಡಲು ಮಾರ್ಚ್‌ 5 ಕೊನೆಯ ದಿನ. ಏಪ್ರಿಲ್‌ 25ರಂದು ಪ್ರಶಸ್ತಿ ಪ್ರದಾನ
ಮಾಡಲಾಗುತ್ತದೆ.

ರೊ.ಪ್ರಸನ್ನಕುಮಾರಿ, ಡಿ–304, ಮಂತ್ರಿ ಎಲೈಟ್‌, ಬನ್ನೇರುಘಟ್ಟ ರಸ್ತೆ, ಬೆಂಗಳೂರು–560976 ಈ ವಿಳಾಸಕ್ಕೆ ಅಂಚೆ/ಕೊರಿಯರ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ಸಂಪರ್ಕಕ್ಕೆ: 9449750492

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು