ಗುರುವಾರ , ಮೇ 26, 2022
26 °C

ನಟ ಪುನೀತ್‌ಗೆ ಮರಣೋತ್ತರ ‘ರೋಟರಿ ವೃತ್ತಿ ಸೇವಾ ಪರಿಣಿತ’ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಟ ದಿವಂಗತ ಪುನೀತ್‌ ರಾಜ್‌ಕುಮಾರ್ ಅವರಿಗೆ ರೋಟರಿ ಕ್ಲಬ್ ವತಿಯಿಂದ ನೀಡಲಾದ ಮರಣೋತ್ತರವಾಗಿ ‘ರೋಟರಿ ವೃತ್ತಿ ಸೇವಾ ಪರಿಣಿತ’ ಪ್ರಶಸ್ತಿಯನ್ನು ಚಲನಚಿತ್ರ ನಿರ್ಮಾಪಕ ಎ.ಚಿನ್ನೇಗೌಡ ಅವರು ಸ್ವೀಕರಿಸಿದರು.

ರಾಜ್ಯದ 3190 ಜಿಲ್ಲೆಗಳ ರೋಟರಿ ಕ್ಲಬ್‌ಗಳ ಮತ್ತು ಸೃಷ್ಟಿ ಅಭಿನಯ ಕಲಾವಿದರ ಕೇಂದ್ರದ ವತಿಯಿಂದ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಗುರುವಾರ ’ನಿತ್ಯ ಸತ್ಯ ನೃತ್ಯ ಪುನೀತ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್‌.ರಂಗಪ್ಪ, ‘ವ್ಯಕ್ತಿಯೊಬ್ಬ ಆದರ್ಶವಾಗಿ ಹೇಗೆ ಬದುಕಬೇಕೆಂದು ಪುನೀತ್ ತೋರಿಸಿಕೊಟ್ಟಿದ್ದಾರೆ. ಬಲಗೈಯಿಂದ ದಾನ ಮಾಡಿದರೆ ಎಡಗೈಗೆ ತಿಳಿಯಬಾರದು ಎನ್ನುವ ನಿಯಮವನ್ನು ಪಾಲಿಸಿದವರು ಅವರು. ಅವರ ಸಿನಿಮಾಗಳು ಮನರಂಜನೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ’ ಎಂದರು.

ಬೆಂಗಳೂರು ಹನುಮಂತನಗರದ ರೋಟರಿ ಅಧ್ಯಕ್ಷ ಎ.ವಿ.ಸತ್ಯನಾರಾಯಣ ಉಪಸ್ಥಿತರಿದ್ದರು. ಸೃಷ್ಟಿ ಸೆಂಟರ್ ಮತ್ತು ಪುನೀತ್ ಅಭಿಮಾನಿಗಳು ನಟನಿಗೆ ನೃತ್ಯದ ಮೂಲಕ ಗೌರವ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು