ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಗಳ ಮನೆ ಮೇಲೆ ದಾಳಿ; ನಗದು, ಡ್ರ್ಗಾಗರ್ ಜಪ್ತಿ

Last Updated 23 ಜುಲೈ 2021, 16:44 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ರೌಡಿ ಚಟುವಟಿಕೆ ಹತ್ತಿಕ್ಕಲು ಕಾರ್ಯಾಚರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ರೌಡಿಗಳು ಹಾಗೂ ಸಹಚರರ 58 ಮನೆಗಳ ಮೇಲೆ ಶುಕ್ರವಾರ ನಸುಕಿನಲ್ಲಿ ದಿಢೀರ್ ದಾಳಿ ನಡೆಸಿದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಹಾಗೂ ಹಲವು ರೌಡಿಗಳ ಮನೆ ಮೇಲೆ ಇತ್ತೀಚೆಗಷ್ಟೇ ದಾಳಿ ನಡೆಸಿದ್ದ ಪೊಲೀಸರು, ಆಯುಧಗಳು, ಗಾಂಜಾ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದರು. ಕೆಲವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ದಾಳಿ ಮಾಹಿತಿ ತಿಳಿದಿದ್ದ ಕೆಲ ರೌಡಿಗಳು ತಲೆಮರೆಸಿಕೊಂಡಿದ್ದರು. ಅಂಥ ರೌಡಿಗಳ ಮನೆ ಮೇಲೆಯೇ ಶುಕ್ರವಾರ ದಾಳಿ ಮಾಡಲಾಗಿದೆ.

‘ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ್, ಸೈಕಲ್ ರವಿ, ಸೈಲೆಂಟ್ ಸುನೀಲ್, ಜೆಸಿಬಿ ನಾರಾಯಣ್ ಹಾಗೂ ಹಲವರು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಅವರಲ್ಲಿ ಕೆಲವರು ನ್ಯಾಯಾಂಗ ಬಂಧನದಲ್ಲಿದ್ದು, ಜೈಲಿನಿಂದಲೇ ಸಂಚು ರೂಪಿಸಿ ಸಹಚರರ ಮೂಲಕ ಅಪರಾಧ ಕೃತ್ಯ ಮಾಡಿಸುತ್ತಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ನಾಲ್ವರು ಪ್ರಮುಖ ರೌಡಿಗಳು ಹಾಗೂ ಅವರ ಸಹಚರರ ಪಟ್ಟಿ ಸಿದ್ಧಪಡಿಸಲಾಗಿತ್ತು. ಅದರನ್ವಯ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ ನೇತೃತ್ವದ ತಂಡಗಳು 58 ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದವು. ಇದೇ ವೇಳೆಯೇ 28 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

ಡ್ರ್ಯಾಗರ್, ನಗದು: ‘ಕಲಾಸಿಪಾಳ್ಯ ರೌಡಿ ಪಟ್ಟಿಯಲ್ಲಿ ಹೆಸರಿದ್ದ ನಾಗ್‌ನ ಮನೆಯಲ್ಲಿ ₹ 2 ಲಕ್ಷ ನಗದು ಹಾಗೂ ಡ್ರ್ಯಾಗರ್‌ ಪತ್ತೆಯಾಗಿವೆ. ಇತರೆ ರೌಡಿಗಳ ಮನೆಯಲ್ಲೂ ಡ್ರ್ಯಾಗರ್‌ಗಳು ಸಿಕ್ಕಿವೆ. ಎಲ್ಲವನ್ನೂ ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿ ಹೇಳಿದರು.

‘ಸೈಕಲ್ ರವಿ ಮನೆಯಲ್ಲಿ ಆಸ್ತಿ ದಾಖಲೆಗಳು ಸಿಕ್ಕಿವೆ. ಶಿವಾಜಿನಗರ ಠಾಣೆ ರೌಡಿ ಪಟ್ಟಿಯಲ್ಲಿ ಹೆಸರಿರುವ ಶಹನಾಜ್ ಮನೆಯಲ್ಲಿ 254 ಆಧಾರ್ ಕಾರ್ಡ್‌ಗಳು ಹಾಗೂ ಬೇನಾಮಿ ಹೆಸರಿನ ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಆಧಾರ್ ಕಾರ್ಡ್‌ಗಳು ಅಸಲಿಯೋ ನಕಲಿಯೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT