ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರಿಯಿಂದ ₹ 80 ಲಕ್ಷ ಸುಲಿಗೆ:ಆರೋಪಿಗಳಿಗೆ ಜನಪ್ರತಿನಿಧಿ ನಂಟು

Last Updated 29 ಜನವರಿ 2023, 19:55 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಅಡಿಕೆ ಮಂಡಿ ಮಾಲೀಕರಿಗೆ ಸೇರಿದ ₹ 80 ಲಕ್ಷ ದೋಚಿದ್ದ ಅಂತರರಾಜ್ಯ ಆರೋಪಿಗಳಿಗೆ ಆಂಧ್ರಪ್ರದೇಶದ ಅದೋನಿಯ ಜನಪ್ರತಿನಿಧಿಯೊಬ್ಬರ ನಂಟಿರುವುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

ಮೋಹನ್‌ಕುಮಾರ್‌ ಅವರು ಸೇಲಂನ ವ್ಯಕ್ತಿಯೊಬ್ಬರಿಗೆ₹ 80 ಲಕ್ಷ ತಲುಪಿಸಲು ಕಾರು ಚಾಲಕ ಚಂದನ್‌ ಹಾಗೂ ಕಾರ್ಮಿಕ ಕುಮಾರಸ್ವಾಮಿ ಅವರನ್ನು ಡಿಸೆಂಬರ್‌ 27ರಂದು ಬೆಂಗಳೂರಿಗೆ ಕಳುಹಿಸಿದ್ದರು.

ಅಲ್ಲದೆ, ಉದ್ಯಮಿ ಒಬ್ಬರಿಂದ ಹಣ ಪಡೆಯುವಂತೆಯೂ ತಿಳಿಸಿದ್ದರು. ಇಬ್ಬರೂ ನಗರಕ್ಕೆ ಬಂದು ಹಣ ಪಡೆದು ಸೇಲಂಗೆ ವಾಪಸ್‌ ತೆರಳುವಾಗ ಶಾಂತಿನಗರ ಸಮೀಪ ಪೊಲೀಸ್‌ ಸೋಗಿನಲ್ಲಿ ಬಂದ ಮೂವರು ಹಣ ದೋಚಿದ್ದರು.

ಪ್ರಕರಣದಲ್ಲಿ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಭತಲ್‌ ಶಿವರಾಮ್‌ ಕೃಷ್ಣ ಯಾದವ್‌, ಸಹೋದರರಾದ ಶೇಖ್‌ ಚೆಂಪತಿ ಲಾಲ್‌ಬಾಷಾ ಹಾಗೂ ಶೇಖ್‌ ಚೆಂಪತಿ ಜಾಕೀರ್‌ ಅವರನ್ನು ಬಂಧಿಸಲಾಗಿದೆ.

ಬಂಧಿತರು ತನಿಖೆಯ ವೇಖೆ ಜನಪ್ರತಿನಿಧಿಯೊಬ್ಬರ ಹೆಸರು ಹೇಳಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT