ಬೆಂಗಳೂರು: ಅರ್ಜಿದಾರರಿಗೆ ಸಕಾಲಕ್ಕೆ ಮಾಹಿತಿ ಒದಗಿಸದೇ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘಿಸಿದ ಬೆಂಗಳೂರು ನಗರ ಜಿಲ್ಲೆ ಮತ್ತು ಗ್ರಾಮಾಂತರ ಜಿಲ್ಲೆಯ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ಗಳಿಗೆ ಮಾಹಿತಿ ಆಯೋಗ ತಲಾ ₹25 ಸಾವಿರ ದಂಡ ವಿಧಿಸಿ, ಎಚ್ಚರಿಕೆಯ ಸಂದೇಶ ರವಾನಿಸಿದೆ.

ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ ಅವರು ಆಯೋಗದ ವಿಚಾರಣೆಗೆ ಸತತ ಗೈರು ಹಾಜರಾಗಿದ್ದಲ್ಲದೇ ಅರ್ಜಿದಾರರ ಕೋರಿಕೆಗೆ ಸ್ಪಂದಸದೇ ಕಾಯ್ದೆ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ಎರಡು ಪ್ರಕರಣಗಳಲ್ಲಿ ತಲಾ ₹25 ಸಾವಿರ ದಂಡ ವಿಧಿಸಿದೆ. ಅಲ್ಲದೇ, ಒಂದು ಪ್ರಕರಣದಲ್ಲಿ ಅಧಿಕಾರಿ ವಿರುದ್ಧ ಇಲಾಖೆ ನಿಯಮಾವಳಿಗಳಂತೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದೆ.

ಅದೇ ರೀತಿ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ವಿಶ್ವನಾಥ್ ಅವರಿಗೂ ಪ್ರಕರಣವೊಂದರಲ್ಲಿ ₹25 ಸಾವಿರ ದಂಡ ವಿಧಿಸಿದ್ದಲ್ಲದೇ ಇಲಾಖೆಗೆ ವಿಚಾರಣೆಗೆ ಶಿಫಾರಸು ಮಾಡುವುದಾಗಿ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಆಯೋಗದ ವಿಚಾರಣೆಗೆ ಸತತ ಗೈರು ಹಾಜರಾಗಿದ್ದಲ್ಲದೇ ಅರ್ಜಿದಾರರಿಗೆ ಮಾಹಿತಿ ಒದಗಿಸದ ಕೆ.ಆರ್.ಪುರದ ತಹಶೀಲ್ದಾರ್ ರಾಜು ಅವರಿಗೆ ₹ 25 ಸಾವಿರ ದಂಡ ವಿಧಿಸಿ, ಶೋಕಾಸ್ ನೋಟಿಸ್ ನೀಡಿದೆ.

ದೇವನಹಳ್ಳಿ ತಾಲ್ಲೂಕಿನ ರೈತರೊಬ್ಬರು ಸರ್ಕಾರಿ ಶಾಲೆ ಜಮೀನನ್ನು ಉಳಿಸಲು ಕಂದಾಯ ಇಲಾಖೆಯ ದಾಖಲೆಗಳನ್ನು ಕೋರಿ ಸಲ್ಲಿಸಿದ ಅರ್ಜಿಗೆ ನಿರ್ಲಕ್ಷ್ಯ ವಹಿಸಿದ ದೇವನಹಳ್ಳಿ ತಹಶೀಲ್ದಾರ್ ಅನಿಲ್ ಅವರಿಗೂ ₹25 ಸಾವಿರ ದಂಡ ವಿಧಿ, ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಭೂಗಳ್ಳರ ಪಾಲಾಗುತ್ತಿದ್ದ ಸರ್ಕಾರಿ ಶಾಲೆಯ ಜಮೀನನ್ನು ಉಳಿಸಲು ಹೋರಾಡುತ್ತಿರುವ ಹಿರಿಯ ನಾಗರಿಕ ತಿರುಮಲ್ಲಪ್ಪ ಅವರ ಕೋರಿಕೆಗೆ ಮನ್ನಣೆ ನೀಡದ ತಹಶೀಲ್ದಾರ್ಗೆ ದಂಡದ ಬಿಸಿ ಮುಟ್ಟಿಸಿದೆ. ವಿಚಾರಣೆ ವೇಳೆ ಎಲ್ಲಾ ದಾಖಲೆಗಳನ್ನು ಒದಗಿಸುವುದಾಗಿ ಅಧಿಕಾರಿ ಒಪ್ಪಿಕೊಂಡು ದಾಖಲೆ ನೀಡದೇ ಸತಾಯಿಸುತ್ತಿದ್ದರು ಎಂದು ಆಯೋಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.