ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋಣದ ಗಣಿ’ ಪುಸ್ತಕ ಬಿಡುಗಡೆ: ಮಾನಸಿಕ ಮಲ ಹೊರುವ ಸ್ಥಿತಿ

ರುದ್ರಪ್ಪ ಹನಗವಾಡಿಯವರ ‘ಋಣದ ಗಣಿ’ ಪುಸ್ತಕ ಬಿಡುಗಡೆ
Last Updated 16 ಜುಲೈ 2022, 19:43 IST
ಅಕ್ಷರ ಗಾತ್ರ

ಬೆಂಗಳೂರು: ಅಂಬೇಡ್ಕರ್‌ ಅವರ ಆಶಯಗಳನ್ನು ಬದುಕಿನ ಭಾಗವಾಗಿಸಿಕೊಂಡಿದ್ದ ಕೆಲ ದಲಿತರು ಮಾನಸಿಕ ಮಲ ಹೊರುವ ಕಾರ್ಯಕ್ಕೆ ತೆರೆದುಕೊಂಡಿದ್ದಾರೆ ಎಂದು ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಗಾಂಧಿ ಭವನದಲ್ಲಿ ಶನಿವಾರ ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‌ ಹಮ್ಮಿಕೊಂಡಿದ್ದ ರುದ್ರಪ್ಪ ಹನಗವಾಡಿ ಅವರ ’ಋಣದ ಗಣಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಮಲಹೊರುವ ಪದ್ಧತಿಯು ಸಂವಿಧಾನ ಕೊಟ್ಟ ಅಸ್ತ್ರದಿಂದ ನಿರ್ಮೂಲನೆ ಆಯಿತು. ಆದರೆ, ಕೆಲವರು ಇಂದಿಗೂ ಮಾನ ಸಿಕವಾಗಿ ಮಲ ಹೊರುತ್ತಲೇ ಇದ್ದಾರೆ. ಬೆಳೆಸಿದ ಸಮಾಜವನ್ನೇ ತುಳಿಯುತ್ತಿದ್ದಾರೆ. ಬಹುತ್ವದ ಭಾರತ ಇಲ್ಲವಾಗುತ್ತಿದೆ. ಸಾವಿರಾರು ವರ್ಷಗಳಿಂದ ಅಸಮಾನತೆಗೆ ಕಾರಣರಾದವರು ವಿಜೃಂಭಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಮಾನತೆಯಲ್ಲಿ ನಂಬಿಕೆ ಇಟ್ಟವರು ಕಣ್ಣು, ಕಿವಿ ಕಳೆದುಕೊಳ್ಳದೆ ಎಚ್ಚರವಹಿಸಬೇಕು ಎಂದು ಸಲಹೆನೀಡಿದರು.

ರುದ್ರಪ್ಪ ಅವರು ಹುಟ್ಟಿನಿಂದ ಬಂದ ದಲಿತ ಸಂವೇದನೆಯನ್ನು ಕಾಪಾಡಿಕೊಂಡಿದ್ದಾರೆ. ಅವರ ಬರಹಗಳಲ್ಲಿ ಸಮಾಜಕ್ಕಾಗಿ ಮರಳಿ ನೀಡಿದ ಕುರುಹುಗಳಿವೆ. ಅಧಿಕಾರ ಬಂದಾಗಲೂ ನಡೆದು ಬಂದ ದಾರಿ ಸ್ಮರಿಸಿಕೊಳ್ಳುವ, ಸಮ ಸಮಾಜಕ್ಕೆ ತುಡಿಯುವ ಮನಸ್ಸು ಕಾಣಬಹುದು. ನಾಯಕರು ಸರಿದಾರಿಯಲ್ಲಿ ಸಾಗಿದರೆ ಸಮಾಜದ ಜನರೂ ಅನುಸರಿಸುತ್ತಾರೆ ಎನ್ನುವುದಕ್ಕೆ ಮಾದರಿಯಾಗಿ
ದ್ದಾರೆ ಎಂದು ಬಣ್ಣಿಸಿದರು.

ಕೃತಿ ಕುರಿತು ಮಾತನಾಡಿದ ಪ್ರಾಧ್ಯಾಪಕ ಕೆ.ವೈ. ನಾರಾಯಣಸ್ವಾಮಿ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣ, ಮಾನವೀಯತೆ ಸಮಾಧಿಯಾಗುತ್ತಿದೆ. ಸಮಾಧಿಯನ್ನೇ ವಿಜೃಂಭಿಸುವ ಕೆಲಸಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪುಸ್ತಕ ಬಿಡುಗಡೆ ಮಾಡಿದರು. ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಇಂದಿರಾ ಕೃಷ್ಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಬಿ.ಆರ್.ಪೊಲೀಸ ಪಾಟೀಲ, ಗಾಯಕ ಚೆನ್ನಿ, ಹೆಗ್ಗೆರೆ ರಂಗಪ್ಪ ಗೀತೆಗಳನ್ನು ಹಾಡಿದರು.

ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ, ಚಿಂತಕ ಕೆ.ಮರುಳಸಿದ್ದಪ್ಪ, ಲೇಖಕ ರುದ್ರಪ್ಪ, ಗಾಯತ್ರಿ ರುದ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT