ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಿಷ್ಣುತೆಗಾಗಿ ಸಮ್ಮೇಳನಕ್ಕೆ ದೇಣಿಗೆ ಸಂಗ್ರಹ

Last Updated 28 ಆಗಸ್ಟ್ 2018, 19:20 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸೆ.2ರಂದು ದಕ್ಷಿಣಾಯಣ ಮತ್ತು ಗ್ರಾಮಸೇವಾ ಸಂಘದ ಆಶ್ರಯದಲ್ಲಿ ನಡೆಯಲಿರುವ ‘ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ’ಕ್ಕಾಗಿ ದೇಣಿಗೆ ಸಂಗ್ರಹ ನಗರದ ಮಹಾತ್ಮ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆ ಬಳಿ ನಡೆಯಿತು.

ರಂಗಕರ್ಮಿ ಪ್ರಸನ್ನ, ವಿಜಯಮ್ಮ, ಚಿಂತಕರಾದ ಮೂಡ್ನಾಕೂಡು ಚಿನ್ನಸ್ವಾಮಿ, ಅಗ್ರಹಾರ ಕೃಷ್ಣಮೂರ್ತಿ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮೇಳನದ ನಿಲುವಳಿ ಸಾಲುಗಳನ್ನು ಓದಿದರು.

ಸಮ್ಮೇಳನದ ವಿವರ ನೀಡಿದ ಪ್ರಸನ್ನ ಅವರು, ‘ಸುಮಾರು 40 ವರ್ಷಗಳ ಹಿಂದೆ ನಡೆದ ಬಂಡಾಯ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ಈ ಸಮ್ಮೇಳನವನ್ನು ನಡೆಸುತ್ತಿದ್ದೇವೆ. ಅಂದಿನ ಸಮ್ಮೇಳನ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಿತು. ಈ ಸಮ್ಮೇಳನ ಸಹಿಷ್ಣುತೆಯನ್ನು ಎತ್ತಿಹಿಡಿಯಲಿದೆ’ ಎಂದರು.

‘ಇದೊಂದು ಮಹತ್ವದ ಸಮ್ಮೇಳನವಾಗಿದ್ದು, ದೇಶದ ವಿವಿಧ ಭಾಗಗಳಿಂದ ಖ್ಯಾತ ಲೇಖಕರು, ಚಿಂತಕರು ಭಾಗವಹಿಸಲಿದ್ದಾರೆ. ಅತ್ಯಂತ ಸರಳವಾಗಿ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಸಮ್ಮೇಳನಕ್ಕೆ ತಗಲುವ ಕನಿಷ್ಠ ವೆಚ್ಚಗಳಿಗಾಗಿ ಖಾದಿ ಬಟ್ಟೆ, ಪುಸ್ತಕ ಮಾರುವ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT